ಹುಬ್ಬಳ್ಳಿ: ಹಿಜಾಬ್ ಪ್ರಕರಣವನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ದ್ವಿ ಸದಸ್ಯ ಪೀಠ ಒಬ್ಬ ನ್ಯಾಯಾಧೀಶರು ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದ್ದರೇ ಮತ್ತೊಬ್ಬರು ಹೈಕೋರ್ಟ್ ಆದೇಶವನ್ನು ತಿರಸ್ಕಾರ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಸಾಂವಿಧಾನ ಪೀಠ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ತೀರ್ಪು ಹೊರಬರಬೇಕಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ಹಿಜಾಬ್ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ದ್ವಿ ಸದಸ್ಯ ಪೀಠ ಈಗ ಪ್ರಕರಣವನ್ನು ಸಿಜೆಐಗೆ ವರ್ಗಾವಣೆ ಮಾಡಿದ್ದು, ಈ ಬಗ್ಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಸಾಂವಿಧಾನ ಪೀಠ ನ್ಯಾಯಾಲಯದ ಮೂಲಕ ಹಿಜಾಬ್ ಪ್ರಕರಣ ಶೀಘ್ರವೇ ಇತ್ಯರ್ಥವಾಗಬೇಕಿದೆ.
ಈಗಾಗಲೇ ದ್ವಿ ಸದಸ್ಯ ಪೀಠದಲ್ಲಿ ಎರಡು ರೀತಿಯಲ್ಲಿ ತೀರ್ಪು ಬಂದಿದ್ದು, ಯಥಾಸ್ಥಿತಿ ಕಾಪಾಡಲು ಕೋರ್ಟ್ ಸೂಚನೆ ನೀಡಿದ್ದು, ಸಿಜೆಐ ತೀರ್ಪಿನ ನಂತರವೇ ಮುಂದಿನ ನಿರ್ಧಾರ ಬರಲಿದೆ. ಈಗ ಎರಡು ವಿಭಿನ್ನ ರೀತಿಯ ತೀರ್ಪಿನಿಂದ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
ಹಿಜಾಬ್ ದೇಶದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಚರ್ಚೆಗೆ ಬಂದಿರುವ ವಿಷಯವಾಗಿದ್ದು, ಇತ್ತೀಚೆಗೆ ಇರಾಕ್ ಹಾಗೂ ಇರಾನ್ ದೇಶದಲ್ಲಿ ಅಲ್ಲಿನ ಮಹಿಳೆಯರು ಹಿಜಾಬ್ ಧರಿಸುವುದನ್ನು ವಿರೋಧಿಸಿ ಧ್ವನಿ ಎತ್ತಿದ್ದಾರೆ. ಕೂಡಲೇ ಇದಕ್ಕೆ ಒಂದು ಸೂಕ್ತ ನಿರ್ಧಾರದ ಅವಶ್ಯಕತೆ ಇದೆ ಎಂದು ಅವರು ಹೇಳಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
13/10/2022 01:17 pm