ನವಲಗುಂದ: ಮಾದಕ ದ್ರವ್ಯ ಸೇವನೆ ವಿರುದ್ಧದ ಅಂತರರಾಷ್ಟ್ರೀಯ ದಿನದ ಅಂಗವಾಗಿ ನವಲಗುಂದ ಪಟ್ಟಣದ ರಾಣಿ ಚನ್ನಮ್ಮ ವಸತಿ ಶಾಲೆ ಮತ್ತು ಮೆಟ್ರಿಕ ಪೂರ್ವ ಬಾಲಕರ ವಸತಿ ಶಾಲಾ ವಿದ್ಯಾರ್ಥಿಗಳಿಗೆ ನಗರದ ಪೊಲೀಸ್ ಠಾಣೆಯ ಸಿಪಿಐ ಚಂದ್ರಶೇಖರ್ ಮಠಪತಿ ಹಾಗೂ ಎಫ್ ಬಿ ಪಾಟೀಲ್ ಅವರಿಂದ ಜಾಗೃತಿ ಮೂಡಿಸಲಾಯಿತು.
ಮಾದಕ ದ್ರವ್ಯ ಸೇವನೆಯಿಂದ ಆಗುವಂತ ದುಷ್ಟಪರಿಣಾಮಗಳ ಬಗ್ಗೆ ಪೊಲೀಸರು ಮಕ್ಕಳಿಗೆ ತಿಳಿಹೇಳಿದರು. ಈ ಸಂಧರ್ಭದಲ್ಲಿ ಶಾಲಾ ಸಿಬ್ಬಂದಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
Kshetra Samachara
28/06/2022 08:32 pm