ಹುಬ್ಬಳ್ಳಿ/ ಧಾರವಾಡ: ಹುಬ್ಬಳ್ಳಿ, ಧಾರವಾಡ ಪೊಲೀಸ್ ಕಮಿಷನರೇಟ್‌ನ ವಿವಿಧ ಪೊಲೀಸ್ ಠಾಣೆಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ವರ್ಷ ಕರ್ತವ್ಯ ನಿರ್ವಹಿಸಿದ 300 ಜನ ಪೊಲೀಸ್ ಸಿಬ್ಬಂದಿಯನ್ನು ಆಂತರಿಕ ವರ್ಗಾವಣೆಗೆ ಅಂತಿಮಗೊಳಿಸಲಾಗಿದೆ.
36 ಎಎಸ್‌ಐ, 197 ಹೆಡ್ ಕಾನ್‌ಸ್ಟೇಬಲ್ ಮತ್ತು 67 ಕಾನ್‌ಸ್ಟೇಬಲ್‌ಗಳ ಹೆಸರು ವರ್ಗಾವಣೆಯ ಅಂತಿಮ ಪಟ್ಟಿಯಲ್ಲಿವೆ. ಧಾರವಾಡ ವಿದ್ಯಾಗಿರಿ ಠಾಣೆಯಿಂದ 21, ಹುಬ್ಬಳ್ಳಿ ಶಹರ ಠಾಣೆಯಿಂದ 20, ಹಳೇ ಹುಬ್ಬಳ್ಳಿ ಠಾಣೆಯಿಂದ 18 ಹಾಗೂ ನಾಲ್ಕು ಸಂಚಾರ ಠಾಣೆಗಳಿಂದ 10 ಎಎಸ್‌ಐ ಸೇರಿ 51 ಸಿಬ್ಬಂದಿ ವರ್ಗಾವಣೆ ಆಗಲಿದ್ದಾರೆ ಎಲ್ಲ ಠಾಣೆಗಳಿಂದ 10ಕ್ಕಿಂತ ಹೆಚ್ಚು ಸಿಬ್ಬಂದಿಯ ಹೆಸರು ಪಟ್ಟಿಯಲ್ಲಿದ್ದರೆ, ಗೋಕುಲ ಪೊಲೀಸ್ ಠಾಣೆಯಿಂದ ಮಾತ್ರ ಇಬ್ಬರ ಹೆಸರು ಇದೆ.
ಕಮಿಷನರೇಟ್‌ನ ಎಲ್ಲ ಠಾಣೆಗಳ ಇನ್‌ಸ್ಪೆಕ್ಟರ್‌ಗಳಿಗೆ ಕಮಿಷನರ್ ಲಾಬುರಾಮ್ ಬುಧವಾರ ಪಟ್ಟಿ ಕಳುಹಿಸಿದ್ದು, ನವನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಜೂನ್ 16ರಂದು ಬೆಳಿಗ್ಗೆ 11ಕ್ಕೆ ನಡೆಯಲಿರುವ ಕೌನ್ಸಲಿಂಗ್‌ಗೆ ಸಿಬ್ಬಂದಿಯನ್ನು ಕಳುಹಿಸುವಂತೆ ಸೂಚಿಸಿದ್ದಾರೆ.
Kshetra Samachara
15/06/2022 07:24 pm