ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡಕೇಂದ್ರ ಕಾರಾಗೃಹಕ್ಕೆ ನ್ಯಾಯಮೂರ್ತಿಗಳ ಭೇಟಿ: ವೀರ ಸಾವರಕರ್ ಪುಸ್ತಕ ಇಡಲು ಸೂಚನೆ

ಧಾರವಾಡ: ಧಾರವಾಡ ಕೇಂದ್ರ ಕಾರಾಗೃಹಕ್ಕೆ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಧ್ಯಕ್ಷರೂ ಆಗಿರುವ ನ್ಯಾಯಮೂರ್ತಿ ಬಿ.ವೀರಪ್ಪ ಭೇಟಿ ನೀಡಿದರು.

ಈ ವೇಳೆ ಜೈಲಿನ ಗ್ರಂಥಾಲಯಕ್ಕೆ ಭೇಟಿ ನೀಡಿದ ಅವರು, ವೀರ ಸಾವರಕರ್ ಪುಸ್ತಕ ಇಟ್ಡಿದ್ದಿರಾ? ಎಂದು ಕೇಳಿದರು. ಈ ಬಗ್ಗೆ ಇಲ್ಲಾ ಎಂದ ಜೈಲು ಸಿಬ್ಬಂದಿಗೆ ಸಾವರಕರ್ ಬಗ್ಗೆ ಪುಸ್ತಕ ಇಡಲು ಸೂಚನೆ ನೀಡಿದರು. ಅವರೊಬ್ಬ ಸ್ವಾತಂತ್ರ್ಯ ಹೋರಾಟಗಾರ, ಅವರ ಬಗ್ಗೆ ತಮಗೆ ಗೊತ್ತಾ? ಎಂದು ಪ್ರಶ್ನೆ ಮಾಡಿದ ಅವರು, ರಾಮಾಯಣ,‌ ಮಹಾಭಾರತ, ಬೈಬಲ್ ಹಾಗೂ ಕುರಾನ್ ಇದೆನಾ? ಎಂದು ಪ್ರಶ್ನೆ ಮಾಡಿದರು. ಅಲ್ಲದೇ ಆ ಪುಸ್ತಕಗಳನ್ನೂ ಇಡಲು ಸೂಚಿಸಿದರು.

Edited By : Manjunath H D
Kshetra Samachara

Kshetra Samachara

20/05/2022 11:20 pm

Cinque Terre

29.53 K

Cinque Terre

1

ಸಂಬಂಧಿತ ಸುದ್ದಿ