ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ತೆರವು ಕಾರ್ಯಾಚರಣೆಯನ್ನು ಪೂರ್ಣಗೊಳಿಸಲು ಆಗ್ರಹ: ವಾರ್ಡ್ ಜನರಿಂದ ಪುರಸಭೆಗೆ ಮನವಿ

ನವಲಗುಂದ: ನಗರದ ಚೌಡಿಯಿಂದ ಅಂಬೇಡ್ಕರ ನಗರಕ್ಕೆ ಹೋಗುವ ರಸ್ತೆಯ ಗಟಾರ ದಂಡೆಯ ಮೇಲೆ ಕಟ್ಟಿದ ಕಟ್ಟೆ, ಹಾಕಿರುವಂತಹ ಕಟ್ಟಿಗೆ, ಶೌಚಾಲಯ ಪೂರ್ಣ ಪ್ರಮಾಣದಲ್ಲಿ ತೆರವುಗೊಳಿಸುವಂತೆ ಆಗ್ರಹಿಸಿ, ವಾರ್ಡ್ ಜನರು ಪುರಸಭೆಗೆ ಒತ್ತಾಯಿಸಿ ಮನವಿಯನ್ನು ನೀಡಿದರು.

ಕಳೆದ ವಾರ ಚೌಡಿಯಿಂದ ಅಂಬೇಡ್ಕರ ನಗರಕ್ಕೆ ಹೋಗುವ ರಸ್ತೆಯನ್ನು ಸ್ಥಳೀಯರು ಅತಿಕ್ರಮಣ ಮಾಡಿದ್ದಾರೆ ಎಂದು ಪ್ರತಿಭಟನೆಗೆ ಇಳಿದ ಘಟನೆ ನಡೆದಿತ್ತು. ಪುರಸಭೆ ಅಧಿಕಾರಿಗಳು ಸಹ ತೆರವು ಕಾರ್ಯಚರಣೆ ಮಾಡಿದ್ದರು. ಆದರೆ ಅದು ಪೂರ್ಣ ಪ್ರಮಾಣದಲ್ಲಿ ತೆರವುಗೊಂಡಿಲ್ಲ ಸಂಪೂರ್ಣವಾಗಿ ತೆರವು ಮಾಡಬೇಕು ಎಂದು ಆಗ್ರಹಿಸಿದರು.

Edited By : Shivu K
Kshetra Samachara

Kshetra Samachara

31/03/2022 01:50 pm

Cinque Terre

37.53 K

Cinque Terre

0

ಸಂಬಂಧಿತ ಸುದ್ದಿ