ಅಣ್ಣಿಗೇರಿ; ಈ ಮಹಾಮಾರಿ ಕೊರೊನಾ ಕಳೆದ ಎರಡು ವರ್ಷಗಳಿಂದ ಜನರ ನೆಮ್ಮದಿ ಹಾಳು ಮಾಡಿದ್ದಲ್ಲದೆ, ಸಂತೋಷ ಸಡಗರದಿಂದ ಮನೆ ಮಂದಿಯಲ್ಲಾ ಕೂಡಿ ಆಚರಿಸಬೇಕಿದ್ದ ಧಾರ್ಮಿಕ ಹಬ್ಬಗಳು ಸಹ ಕೊರೋನಾದ ಕರಿ ಛಾಯೆಯಿಂದ ಮಾಡಲಾಗದೇ ಸೊಗಸೆ ಇಲ್ಲದಂತಾಗಿದೆ.
ಈ ಹಿನ್ನೆಲೆ ಈ ವರ್ಷದ ಮೊದಲ ಹಬ್ಬ ಸಂಕ್ರಾಂತಿ ಹಬ್ಬಕ್ಕೆ, ರಾಜ್ಯ ಸರ್ಕಾರ ಕರ್ಫ್ಯೂ ಜಾರಿ ಮಾಡಿದ್ದು, ಜನರಿಗೆ ಸೊಗಸೆ ಇಲ್ಲದಂತಾಗಿದೆ. ಇನ್ನು ಈ ಬಾರಿ ಹಬ್ಬದ ಖರೀದಿಗೆ ಜನರು ಮಾರುಕಟ್ಟೆಗೆ ಬರದ ಹಿನ್ನೆಲೆ ವ್ಯಾಪಾರಸ್ಥರಿಗೆ ಬರೆ ಎಳೆದಂತಾಗಿದೆ. ಈ ಬಾರಿ ಆದರೂ ಹಬ್ಬವನ್ನು ಸಂತೋಷದಿಂದ ಮಾಡಬೇಕು ಎಂದುಕೊಂಡಿದ್ದ ಜನರಿಗೆ ನಿರಾಸೆ ಉಂಟಾಗಿದೆ.
Kshetra Samachara
15/01/2022 05:34 pm