ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಗ್ರಾಹಕರಿಗೆ ವ್ಯಾಪಾರದಲ್ಲಿ ಮೋಸ ಆದಲ್ಲಿ, ಗ್ರಾಹಕರ ಕಾಯ್ದೆ ಮೂಲಕ ಪರಿಹಾರ ಪಡೆದುಕೊಳ್ಳ‌ ಬಹುದು:ರಾಜಶೇಖರ ತಿಳಗಂಜಿ

ಕಲಘಟಗಿ: ಸ್ಥಳೀಯ ದಿವಾಣಿ‌ ನ್ಯಾಯಲಯದ ಲ್ಲಿ ಗ್ರಾಹಕರ ಹಕ್ಕುಗಳ ದಿನಾಚರಣೆ ಆಚರಿಸಿ ಗ್ರಾಹಕರ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲಾಯಿತು.

ದಿವಾಣಿ‌ ನ್ಯಾಯಾದೀಶರಾದ ರಾಜಶೇಖರ ತಿಳಗಂಜಿ ಮಾತನಾಡಿ,ಗ್ರಾಹಕರು ಮಾರುಕಟ್ಟೆಯಲ್ಲಿ ‌ಏನೇ ಖರೀದಿ‌ ಮಾಡಿದರು ಅದಕ್ಕೆ ವ್ಯಾಪಾರಿಗಳಿಂದ ರಸೀದಿ ಪಡೆಯಿರಿ ಎಂದರು.

ಗ್ರಾಹಕರಿಗೆ ವ್ಯಾಪಾರದಲ್ಲಿ ಮೋಸ ಆಗಿದ್ದಲ್ಲಿ ಗ್ರಾಹಕರ ಕಾಯ್ದೆ ಮೂಲಕ ಪರಿಹಾರ ಪಡೆದುಕೊಳ್ಳಲು ‌ತಿಳಿಸಿದರು.ತಾಲೂಕಾ ಕಾನೂನು ಸೆವಾ ಸಮಿತಿ,ವಕೀಲರ ಸಂಘ,ಅಭಿಯೋಜನಾ ಇಲಾಖೆಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ವಕೀಲ ಸಂಘದ ಅಧ್ಯಕ್ಷರ ವಿ ಬಿ ಶಿವನಗೌಡರ,ಬಿ ವಿ ಪಾಟೀಲ,ಸಿ ಬಿ ದಾಸ್ತಿಕೊಪ್ಪ,ಎಸ್ ಐ ಕುಂಬಾರ,ಎಸ್ ಟಿ ತೆಗ್ಗಿ ಹಳ್ಳಿ,ಎಸ್ ಜೆ ಸುಂಕದ,ರವಿ ತೋಟಗಂಟಿ,ಕೆ ಬಿ ಗುಡಿಹಾಳ,ಶೋಭಾ ಬಳಿಗೇರ,ವಾಸಂತಿ‌‌ ಖಾನಾಪೂರ,ಎಂ‌ ಜಿ ಚೌದರಿ,ಶಿವರುದ್ರ ಧನಿಗೊಂಡ,ಆರ್ ವಾಯ್ ರೊಳ್ಳಿ ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

24/12/2020 12:39 pm

Cinque Terre

41.28 K

Cinque Terre

0

ಸಂಬಂಧಿತ ಸುದ್ದಿ