ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿವಿಧತೆಯಲ್ಲಿ ಏಕತೆ ತತ್ವ ಹೊಂದಿರುವ ಭಾರತದ ಸಂವಿಧಾನ ವಿಶ್ವಕ್ಕೆ ಮಾದರಿ : ನ್ಯಾ.ಶಾಮಪ್ರಸಾದ್ ಹೆಚ್.ಸಿ

ಹುಬ್ಬಳ್ಳಿ: ಹಲವು ಭಾಷೆ ಸಂಸ್ಕೃತಿ ಹೊಂದಿರುವ ಭಾರತ ವಿವಿಧತೆಯಲ್ಲಿ ಏಕತೆ ಹೊಂದಿದೆ. ಏಕತೆ ತತ್ವ ಹೊಂದಿರುವ ಭಾರತದ ಸಂವಿಧಾನ ವಿಶ್ವಕ್ಕೆ ಮಾದರಿ ಎಂದು ಜಿಲ್ಲಾ ನ್ಯಾಯಾಧೀಶರು ಹಾಗೂ ಕಾರ್ಮಿಕ ನ್ಯಾಯಾಲಯ ಅಧ್ಯಕ್ಷಾಧಿಕಾರಿ ಶಾಮಪ್ರಸಾದ್ ಹೆಚ್.ಸಿ ಹೇಳಿದರು.

ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಹಾಗೂ ವಾರ್ತಾ ಇಲಾಖೆ ಸಹಯೋಗದಲ್ಲಿ ,ಹುಬ್ಬಳ್ಳಿ ನೂತ‌ನ ನ್ಯಾಯಾಲಯದ ಆವರಣದಲ್ಲಿ ಸಂವಿಧಾನದ ದಿನದ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

ದೇಶದ ಸ್ವಾತಂತ್ರ್ಯದ ನಂತರ ಪ್ರಜೆಗಳಿಗೆ ಹಕ್ಕು ಬಾಧ್ಯಗಳನ್ನು ನೀಡುವ ಸಲುವಾಗಿ ಸಂವಿಧಾನ ರಚನೆ ಮಾಡಲಾಯಿತು.

ಸಂವಿಧಾನ ಆಶಯಗಳಿಗೆ ಲೋಪ ಬರದಂತೆ ಕಾಪಾಡಿಕೊಳ್ಳಬೇಕು. ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದ ಸಂವಿಧಾನ ಕರಡು ರಚನಾ ಸಮಿತಿ 2 ವರ್ಷ 11 ತಿಂಗಳು 17 ದಿವಸದಲ್ಲಿ ಸಂವಿಧಾನದ ಕರಡು ಪ್ರತಿ ಸಿದ್ಧಪಡಿಸಿತು.

ಇದನ್ನು 1947 ನವೆಂಬರ್ 26 ರಂದು ಸಂಸತ್ತಿನಲ್ಲಿ ಮಂಡಿಸಲಾಯಿತು. ಇದರ ನೆನಪಿಗಾಗಿ ಸಂವಿಧಾನ ದಿನವನ್ನು ಆಚರಿಸಲಾಗುತ್ತದೆ.

ಸಂವಿಧಾನದಲ್ಲಿ ಮಹಿಳೆಯರು ಹಾಗೂ ದೀನ ದಲಿತರಿಗೆ ಸಮಾನ ಹಕ್ಕುಗಳ ಜೊತೆಗೆ ವಿಷೇಶ ಪ್ರಾವಧನಗಳನ್ನು ಒದಗಿಸಲಾದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ದೇವಿಂದ್ರಪ್ಪ ಎನ್ ಬಿರಾದಾರ್, ಸಂವಿಧಾನ ನಾವು ಹೇಗೆ ನಡೆದುಕೊಳ್ಳಬೇಕು, ಮುಂದೇ ಹೇಗೆ ಇರಬೇಕು ಎಂಬುದನ್ನು ತಿಳಿಸುವ ಸಾಧನವಾಗಿದೆ.

ದೇಶದಲ್ಲಿ ಅಸಮಾನತೆ, ಜಾತಿ ವ್ಯವಸ್ಥೆ ಇರುವುದು ಸಂವಿಧಾನದ ಸಮಾನತೆಯ ತತ್ವಕ್ಕೆ ವಿರುದ್ದವಾದುದು ಎಂದರು.

ವಕೀಲರ ಸಂಘದ ಉಪಾಧ್ಯಕ್ಷ ಎಸ್.ವಿ.ಕೊಪ್ಪರ್ ಭಾರತ ಸಂವಿಧಾನದ ಕುರಿತು ವಿಶೇಷ ಉಪನ್ಯಾಸ ನೀಡಿದರು.

Edited By : Nirmala Aralikatti
Kshetra Samachara

Kshetra Samachara

26/11/2020 07:41 pm

Cinque Terre

47.14 K

Cinque Terre

0

ಸಂಬಂಧಿತ ಸುದ್ದಿ