ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಸಹೋದರ ವಿಜಯ್ ಕುಲಕರ್ಣಿ ಅವರನ್ನು ಧಾರವಾಡದ ಉಪನಗರ ಠಾಣೆಯಲ್ಲಿ ಸಿಬಿಐ ಅಧಿಕಾರಿಗಳು 8 ಗಂಟೆಗಳ ಕಾಲ ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಬೆಳಿಗ್ಗೆಯೇ ಧಾರವಾಡ ಉಪನಗರ ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಆಗಮಿಸಿದ್ದ ವಿಜಯ್ ಕುಲಕರ್ಣಿ ಸಂಜೆ ಹೊತ್ತಿಗೆ ವಿಚಾರಣೆ ಮುಗಿಸಿ ಹೊರ ಬಂದರು. ಬೆಳಿಗ್ಗೆ 11ಕ್ಕೆ ಒಳ ಹೋಗಿದ್ದ ವಿಜಯ್ ಕುಲಕರ್ಣಿ ಸಂಜೆ ಹೊರ ಬಂದಿದ್ದಾರೆ. ವಿಜಯ ಕುಲಕರ್ಣಿ ಜೊತೆಗೆ ವಿನಯ್ ಸೋದರ ಮಾವ ಚಂದ್ರಶೇಖರ ಇಂಡಿ ಕೂಡ ಹೊರ ಬಂದಿದ್ದಾರೆ. ಮಾತನಾಡಿಸಲು ಪ್ರಯತ್ನಿಸಿದ ಮಾಧ್ಯಮದವರಿಗೆ ಮ್ಯಾಟರ್ ಇನ್ ದಿ ಕೋರ್ಟ್ ಎಂದು ಉತ್ತರ ನೀಡಿ ವಿಜಯ್ ಕುಲಕರ್ಣಿ ಹೊರ ನಡೆದರು.
Kshetra Samachara
21/11/2020 10:01 pm