ಹುಬ್ಬಳ್ಳಿ- ಕರ್ನಾಟಕ ಸರ್ಕಾರದ ಆದೇಶದ ಮೇರೆಗೆ, ಹು-ಧಾ ಮಹಾನಗರ ಪಾಲಿಕೆ ವತಿಯಿಂದ ಅವಳಿನಗರದ ವ್ಯಾಪ್ತಿಯಲ್ಲಿ ಬರುವ, ಎಲ್ಲ ವಾಣಿಜ್ಯ ಮಳಗಿಯಲ್ಲಿರು ನಾಮಫಲಕಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು ಎಂದು ಮುಖ್ಯ ಆರೋಗ್ಯಾಧಿಕಾರಿ ಶ್ರೀಧರ ದಂಡೆಪ್ಪನವರ ಅವರ ನೇತ್ರತ್ವದಲ್ಲಿ ನಗರದ ಗೋಕುಲ್ ರಸ್ತೆಯಲ್ಲಿರುವ ಐಸ್ ಕ್ಯೂಬ್, ಫ್ಯಾಂಟಲೂನ್ಸ್, ಸೇವೆನ್ ಬೀನ್ಸ್, ಸೇರಿದಂತೆ ಅರ್ಬನ್ ಓಯಸೆಸ್ಸ್ ಮಾಲ್ ದಲ್ಲಿರುವ ಹಲಾವರು ಶಾಫ್ ಗಳಿಗೆ ನೋಟಿಸ್ ಕೊಡುವುದರ ಮೂಲಕ ಎಚ್ಚರಿಕೆ ನೀಡಿದರು..
ಇನ್ನು ಒಂದು ವಾರದಲ್ಲಿ ನಾಮಫಕವನ್ನು ಕನ್ನಡದಲ್ಲಿ ಹಾಕದಿದ್ದರೆ. ಕೆ.ಎಂ.ಸಿ ಕಾಯ್ದೆ 1976, ಕಲಂ 353, 354 ಹಾಗೂ 343 ರ ಪ್ರಕಾರ ಟ್ರೇಡ್ ಲೈಸೆನ್ಸ್ ರದ್ದುಗೊಳಿಸುವುದಾಗಿ ತಿಳಿಸಿದ್ದಾರೆ...
Kshetra Samachara
04/11/2020 06:32 pm