ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಜಿಲ್ಲಾಧಿಕಾರಿ ಆದೇಶ ಸುಟ್ಟು ಹಾಕಿ ಆಟೋ ಚಾಲಕರ ಆಕ್ರೋಶ.

ಹುಬ್ಬಳ್ಳಿ: ಆಟೋ ರಿಕ್ಷಾ ಪ್ರಯಾಣಿಕರ ದರವನ್ನು ಪರಿಷ್ಕರಣೆ ಮಾಡಿರುವುದನ್ನು ವಿರೋಧಿಸಿ ಹುಬ್ಬಳ್ಳಿಯಲ್ಲಿ ಅವಳಿನಗರದ ಆಟೋ ಚಾಲಕರು ಪರಿಷ್ಕರಣೆ ಆದೇಶ ಪತ್ರವನ್ನು ಸುಟ್ಟು ಹಾಕಿ ದೇಶಪಾಂಡೆ ನಗರದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಹೌದು, ಧಾರವಾಡ ಜಿಲ್ಲೆಯಲ್ಲಿ ಆಟೋ ಪ್ರಯಾಣಿಕರ ದರವನ್ನು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಯಾವೊಂದು ಆಟೋ ಸಂಘಟನೆಗಳನ್ನು ಕರೆದು ಸಭೆ ನಡೆಸದೇ ಮನಸೋ ಇಚ್ಛೆ ಆಟೋ ರಿಕ್ಷಾ ದರವನ್ನು ಪರಿಷ್ಕರಣೆ ಮಾಡಿ ರಾತ್ರೋರಾತ್ರಿ ಆದೇಶವನ್ನು ಹೊರಡಿಸಿದ್ದಾರೆ. ಇದು ಸರಿಯಲ್ಲ. ಈ ಕೂಡಲೇ ಮತ್ತೊಮ್ಮೆ ಜಿಲ್ಲಾಧಿಕಗಳು ಸಭೆ ಕರೆದು ಪರಿಷ್ಕರಣೆ ದರವನ್ನು ನಿಗಧಿ ಮಾಡಬೇಕೆಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿಗಳು 1.6 ಕಿ.ಮೀ ಗೆ ಪ್ರಸ್ತುತವಿರುವ 28 ರೂಪಾಯಿ ದರವನ್ನು 30 ರೂಪಾಯಿಗೆ ಏರಿಸಿದ್ದಾರೆ. ಇದನ್ನು ಅಕ್ಟೋಬರ್ 1 ರಿಂದ ಜಾರಿಗೆ ತರುವಂತೆ ತಿಳಿಸಿದ್ದಾರೆ. ಆದರೆ ಯಾವೊಬ್ಬ ಆಟೋ ಚಾಲಕನನ್ನು ಸಭೆಗೆ ಕರೆಯದೇ ಪರಿಷ್ಕರಣೆ ಮಾಡಿ ಒತ್ತಾಯಪೂರ್ವಕವಾಗಿ ಆಟೋ ಚಾಲಕರ ಮೇಲೆ ಆದೇಶವನ್ನು ಹಾಕುವುದು ಸರಿಯಲ್ಲವೆಂದು ಹುಬ್ಬಳ್ಳಿ-ಧಾರವಾಡದ ಎಲ್ಲ ಆಟೋ ಸಂಘಟನೆಗಳ, ಮಾಲೀಕರ ಮತ್ತು ಚಾಲಕರು ಜಿಲ್ಲಾಡಳಿತದ ವಿರುದ್ಧ ಹರಿಹಾಯ್ದರು. ಈ ವೇಳೆ ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ದಿಕ್ಕಾರ ಕೂಗಿದರು.

Edited By : Somashekar
Kshetra Samachara

Kshetra Samachara

08/08/2022 11:27 am

Cinque Terre

53.61 K

Cinque Terre

16

ಸಂಬಂಧಿತ ಸುದ್ದಿ