ಧಾರವಾಡ: ಇದೇ ಡಿಸೆಂಬರ್ 15ರಂದು ಧಾರವಾಡದ ಜೆಎಸ್ಎಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ರ್‍ಯಾಪಿಡ್ ಸಂಸ್ಥೆ ಹಾಗೂ ಜೆಎಸ್ಎಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ ವತಿಯಿಂದ ಮಹಿಳೆಯರಿಗಾಗಿ ನಾಲ್ಕನೆಯ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜೆಎಸ್‌ಎಸ್ ಕಾರ್ಯದರ್ಶಿ ಡಾ.ಅಜೀತ್ ಪ್ರಸಾದ್ ಹೇಳಿದ್ದಾರೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಎಸ್ಎಸ್ ಆವರಣದಲ್ಲಿ ಅಂದು ಬೆಳಿಗ್ಗೆ 8:30ಕ್ಕೆ ನೋಂದಣಿಯೊಂದಿಗೆ ಉದ್ಯೋಗ ಮೇಳ ಪ್ರಾರಂಭವಾಗಿ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಈ ಉದ್ಯೋಗ ಮೇಳವು ಯಾವುದೇ ಪದವಿ, ಡಿಪ್ಲೊಮಾ, ಸ್ನಾತಕೋತ್ತರ, ದ್ವಿತೀಯ ಪಿಯುಸಿ, ಎಸ್ಸೆಸ್ಸೆಲ್ಸಿ ಮತ್ತು ಎಸ್ಸೆಸ್ಸೆಲ್ಸಿಗಿಂತ ಕೆಳಗಿನ 18 ರಿಂದ 45 ವರ್ಷ ವಯಸ್ಸಿನ ಮಹಿಳೆಯರಿಗೆ ಮುಕ್ತವಾಗಿರುತ್ತದೆ.
ಹುಬ್ಬಳ್ಳಿ-ಧಾರವಾಡ, ಬೆಂಗಳೂರು ಮತ್ತು ಹಾಸನದಿಂದ ಸುಮಾರು 40 ಕಂಪೆನಿಗಳು 5000 ಉದ್ಯೋಗಾವಕಾಶಗಳೊಂದಿಗೆ ಈ ಉದ್ಯೋಗ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಇದರಲ್ಲಿ ವಿದ್ಯಾ ಸಂಸ್ಥೆಗಳು, ಕಂಪೆನಿಗಳು, ಗಾರ್ಮೆಂಟ್ಸ್, ಸೆಕ್ಯುರಿಟಿ ಏಜೆನ್ಸಿಗಳು ಹಾಗೂ ಇನ್ನಿತರ ಸಂಸ್ಥೆಗಳು
ಭಾಗವಹಿಸಲಿವೆ.
ಉದ್ಯೋಗ ಮೇಳದಲ್ಲಿ ವಿವಿಧ ಹುದ್ದೆಗಳಿಗೆ ಅವಕಾಶ ಮಾರ್ಕೇಟಿಂಗ್ ಮ್ಯಾನೇಜರ್, ಬಿಸಿನೆಸ್ ಡೆವಲಪ್‌ಮೆಂಟ್ ಎಕ್ಸಿಕ್ಯೂಟಿವ್, ರಿಸೆಫ್ಸನಿಸ್ಟ್, ಫೀಲ್ಡ್ ಆಫೀಸರ್, ಎಚ್‌ಆರ್, ಆಪರೇಷನ್ ಮ್ಯಾನೇಜರ್, ಅಕೌಂಟ್ಸ್ ಮ್ಯಾನೇಜರ್, ಐಟಿ ನೆಟ್‌ವರ್ಕ್ ಎಂಜಿನಿಯರ್, ಡೆಸ್ಕ್‌ಟಾಪ್ ಎಂಜಿನಿಯರ್, ಟೀಚರ್, ಲೆಕ್ಚರರ್, ವಾರ್ಡನ್, ಕ್ಲರ್ಕ್, ಅಕೌಂಟೆಂಟ್, ಕ್ವಾಲಿಟಿ ಚೆಕರ್ಸ್, ಸೂಪರ್ ವೈಸರ್‌ಗಳು, ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್, ಟೈಲರಿಂಗ್, ಹೌಸ್ ಕೀಪಿಂಗ್, ಸೆಕ್ಯುರಿಟಿ ಗಾರ್ಡ್, ಅಡುಗೆಯವರು, ಅಸೆಂಬ್ಲಿ ಲೈನ್ ಆಪರೇಟರ್, ಹೋಮ್ ನರ್ಸ್ ಮತ್ತು ಇನ್ನೂ ಅನೇಕ ಹುದ್ದೆಗಳಿವೆ. ಈ ಮೇಳವು ಅನೇಕ ಮಹಿಳೆಯರಿಗೆ ಉತ್ತಮ ಉದ್ಯೋಗಗಳನ್ನು ಪಡೆಯಲು ಮತ್ತು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದರು.
Kshetra Samachara
11/12/2024 06:15 pm