ಹುಬ್ಬಳ್ಳಿ: ನಿರುದ್ಯೋಗದ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಮಂಜುನಾಥ ಹೆಬಸೂರ ಗೆಳೆಯರ ಬಳಗದ ವತಿಯಿಂದ ಡಿಸೆಂಬರ್ 5 ರಂದು ಬೃಹತ್ ಉದ್ಯೋಗ ಮೇಳವನ್ನು ಧಾರವಾಡದ ಶ್ರೀ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಉದ್ಯೋಗ ಮೇಳದ ಆಯೋಜಕರಾದ ಮಂಜುನಾಥ ಹೆಬಸೂರ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿ ಬಳಿಕ ಪಬ್ಲಿಕ್ ನೆಕ್ಸ್ಟ್ ಜೊತೆಗೆ ಮಾತನಾಡಿದ ಅವರು, ಅಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಸಂದರ್ಶನ ಪ್ರಕ್ರಿಯೆ ನಡೆಯಲಿದೆ.
ಈ ಉದ್ಯೋಗ ಮೇಳದಲ್ಲಿ ಬೆಲ್ಲದ್ ಗ್ರೂಪ್ ಆಫ್ ಕಂಪನೀಸ್, ಕಿಯಾ ಶೊರೂಂ ಬೆಳಗಾವಿ, ಮಾಲಿಕಬಾಗ ಆಟೋಮೊಬೈಲ್ಸ್ ಸೇರಿ 50 ಕ್ಕೂ ಹೆಚ್ಚು ಕಂಪನಿಗಳು ಭಾಗಿಯಾಗಲಿದ್ದು, ಎರಡೂ ಸಾವಿರಕ್ಕೂ ಹೆಚ್ಚು ಉದ್ಯೋಗಗಳ ನಿರೀಕ್ಷೆಗಳಿದ್ದು, ವಿಶೇಷವಾಗಿ ಈ ಉದ್ಯೋಗ ಮೇಳದಲ್ಲಿ ವಿಕಲಚೇತನರಿಗೆ ಉದ್ಯೋಗ ನೀಡುವ ಉದ್ದೇಶದಿಂದ ಕೆಲ ಕಂಪನಿಗಳು ಭಾಗಿಯಾಗಲಿವೆ ಎಂದ ಅವರು, ಎಸ್.ಎಸ್.ಎಲ್.ಸಿ, ಪಿಯುಸಿ, ಯಾವುದೇ ಪದವಿ, ಡಿಪ್ಲೊಮಾ, ಎಂಬಿಎ, ಬಿಇ, ಐಟಿಐ ಕಲಿತಿರುವ ಯುವಕ-ಯುವತಿಯರಿಗೆ ಆದ್ಯತೆ ನೀಡಲಾಗುವುದು ಎಂದರು.
ಹೆಚ್ಚಿನ ಮಾಹಿತಿಗಾಗಿ 7353307657, 9686260451 ಗೆ ಸಂಪರ್ಕಿಸಬಹುದು ಎಂದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕರಾದ ಅರವಿಂದ ಬೆಲ್ಲದ್ ನೆರವೇರಿಸಲಿದ್ದಾರೆ.
ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಹಾಗೂ ಪಾಲಿಕೆ ಮಾಜಿ ಸದಸ್ಯರಾದ ಮಲ್ಲಿಕಾರ್ಜುನ ಹೊರಕೇರಿ, ಕೆಎಲ್ಇ ಆಡಳಿತ ಮಂಡಳಿಯ ನಿರ್ದೇಶಕರಾದ ಡಾ. ವಿ ಐ ಪಾಟೀಲ್, ಉದ್ಯೀಗ ಅಧಿಕಾರಿ ಮಹೇಶ್ ಮಾಳವಡೆಕರ ಸೇರಿ ಉಪಸ್ಥಿತರಿರಲಿದ್ದಾರೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/12/2024 02:51 pm