ಹುಬ್ಬಳ್ಳಿ: ಇಲ್ಲಿನ ನಿವಾಸಿಗಳು ಅದು ಹೇಗೆ ಜೀವನ ನಡೆಸುತ್ತಿದ್ದಾರೆ ಎಂಬುದು ದೇವರೆ ಬಲ್ಲ. ಮನೆ ಮುಂದೆ ಗಟಾರ ಬ್ಲಾಕ್ ಆಗಿದೆ. ನಾಲಾ ಇಲ್ಲದೆ ಅಂಗೈಯಲ್ಲಿ ತಮ್ಮ ಜೀವ ಹಿಡಿದುಕೊಂಡು ಬದುಕುತ್ತಿದ್ದಾರೆ. ಅದೆಷ್ಟೋ ನಿವಾಸಿಗಳು ರೋಗಕ್ಕೆ ತುತ್ತಾಗಿದ್ದಾರೆ. ಅಷ್ಟಕ್ಕೂ ಇಲ್ಲಿ ಏನಾಗಿದೆ ಎಂಬುದನ್ನು ತೋರಿಸ್ತೀವಿ ನೋಡಿ...
ಒಂದು ಕಡೆ ನಾಲಾ ಗಟಾರ ತುಂಬಿ ರೋಗಕ್ಕೆ ಆಹ್ವಾನ... ಇನ್ನೊಂದೆಡೆ ಇಲ್ಲಿ ಮೂಲ ಸೌಕರ್ಯಗಳು ಒದಗುತ್ತಿಲ್ಲವೆಂದು ನಿವಾಸಿಗಳ ಗೋಳು.. ಇಷ್ಟೆಲ್ಲಾ ದೃಶ್ಯಗಳು ಕಂಡು ಬಂದಿದ್ದು, ವಾರ್ಡ್ ನಂಬರ್ 54 ರಲ್ಲಿ ಬರುವ ಹೆಗ್ಗೇರಿಯ ದೇವರಾಜ ನಗರದಲ್ಲಿ. ಇಲ್ಲಿ ನಾಲಾ ಗಟಾರ ಇದೆ. ಆದ್ರೆ ಸುಮಾರು ವರ್ಷಗಳಿಂದ ಕಸದಿಂದ ತುಂಬಿದೆ. ಇದುವರೆಗೂ ಯಾರು ಕೂಡ ಬಂದು ಸ್ವಚ್ಛ ಮಾಡಿಲ್ಲ. ಅಷ್ಟೇ ಅಲ್ಲದೆ ಕಸ ತುಂಬುವ ವಾಹನ ಬರುತ್ತಿಲ್ಲವಂತೆ, ಕುಡಿಯುವ ನೀರಿಗೂ ಸಮಸ್ಯೆ. ಹೀಗೆ ಹಲವಾರು ಮೂಲಭೂತ ಸೌಕರ್ಯಗಳಿಂದ ಇಲ್ಲಿನ ನಿವಾಸಿಗಳು ವಂಚಿತರಾಗಿದ್ದಾರೆ.
ಇನ್ನು ನಾಲಾ ಗಟಾರ ಬಗ್ಗೆ ಕಾರ್ಪೊರೇಟರ್ ಸರಸ್ವತಿ ವಿನಾಯಕ ದೋಂಗಡಿ ಅವರಿಗೆ ಅದೆಷ್ಟೋ ಬಾರಿ ಮನವಿ ಕೂಡ ಮಾಡಿದ್ರಂತೆ. ಆದ್ರೆ ಏನು ಪ್ರಯೋಜನವಾಗಿಲ್ಲ. ಈ ನಾಲಾ ಗಟಾರ್ ಒಳಗೆ ಕಾಲು ಜಾರಿ ವಯಸ್ಕರು, ಮಕ್ಕಳು ಬಿದ್ದು ಗಾಯಗೊಂಡಿದ್ದಾರೆ. ನಾಲಾ ಗಟಾರ ಕಟ್ಟುವುದಕ್ಕಾಗಿ ವರ್ಕ್ ಕಾರ್ಡ್ ಕೂಡ ಬಂದಿದೆ. ಆದ್ರೆ ಇದುವರೆಗೂ ಕಾಮಗಾರಿ ಆರಂಭ ಮಾಡಿಲ್ಲ. ಇದೆ ಗಟಾರ್ ನಿಂದ ಹಲವಾರು ರೋಗಕ್ಕೆ ಇಲ್ಲಿನ ನಿವಾಸಿಗಳು ತುತ್ತಾಗಿದ್ದಾರೆಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಇನ್ನು ಈ ಸ್ಥಳೀಯರು ನಾಲಾ ಗಟಾರ ಕಟ್ಟುವುದಕ್ಕಾಗಿ ಜಾಗ ಕೂಡ ಬಿಟ್ಟುಕೊಡುತ್ತೇವೆ. ನಮಗೆ ಶಾಶ್ವತ ಪರಿಹಾರ ಮಾಡಿಕೊಡಿ ಎಂದು ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ವಿನಂತಿ ಮಾಡಿಕೊಂಡಿದ್ದಾರೆ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
Kshetra Samachara
12/10/2022 06:20 pm