ಧಾರವಾಡ: ಧಾರವಾಡ ಶ್ರೀರಾಮನಗರದ ತುಳುಜಾಭವಾನಿ ದೇವಸ್ಥಾನದ ಹಿಂಭಾಗದಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ಒಂದೂವರೆ ತಿಂಗಳು ಕಳೆದರೂ ಮಹಾನಗರ ಪಾಲಿಕೆ ಸಿಬ್ಬಂದಿಯಾಗಲಿ ಅಥವಾ ಎಲ್ ಆ್ಯಂಡ್ ಟಿ ಕಂಪೆನಿಯವರಾಗಲಿ ಅದರತ್ತ ಗಮನಹರಿಸದೇ ಇರುವುದು ಅಲ್ಲಿನ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಈ ಏರಿಯಾದಲ್ಲಿ ನೀರು ಪೂರೈಕೆಯಾದಾಗೊಮ್ಮೆ ಈ ಒಡೆದ ಪೈಪ್‌ನಿಂದ ಸಾಕಷ್ಟು ಪ್ರಮಾಣದಲ್ಲಿ ನೀರು ಪೋಲಾಗುತ್ತದೆ. ಒಂದೂವರೆ ತಿಂಗಳಿನಿಂದ ಈ ಸಮಸ್ಯೆ ಇದ್ದರೂ ಯಾರೂ ಕೂಡ ಕ್ಯಾರೆ ಎಂದಿಲ್ಲ. ಸ್ಥಳಿಯರು ಕೂಡ ಮಹಾನಗರ ಪಾಲಿಕೆಗೆ ಹಾಗೂ ಎಲ್ ಆ್ಯಂಡ್ ಟಿ ಕಂಪೆನಿಯವರಿಗೆ ದೂರು ಕೊಟ್ಟರೂ ಆ ಪೈಪ್‌ಲೈನ್ ದುರಸ್ತಿಗೊಳಿಸಿಲ್ಲ.
ಕೂಡಲೇ ಸಂಬಂಧಿಸಿದವರು ಒಡೆದು ಹೋಗಿರುವ ಪೈಪ್‌ಲೈನ್ ದುರಸ್ತಿಗೊಳಿಸಿ ಪೋಲಾಗುತ್ತಿರುವ ಕುಡಿಯುವ ನೀರನ್ನು ತಡೆ ಹಿಡಿಯಬೇಕಾಗಿದೆ.
Kshetra Samachara
30/09/2022 10:16 pm