ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸತತ ಹೋರಾಟಕ್ಕೆ ಸಿಕ್ಕ ಅಭೂತಪೂರ್ವ ಜಯ: ಶಾಲಾ ಮಕ್ಕಳಿಗೆ ಕುಡಿಯುವವ ನೀರಿನ ಸೌಲಭ್ಯ

ಹುಬ್ಬಳ್ಳಿ: ಸುಮಾರು 32 ವರ್ಷಗಳಿಂದ ಈ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇತ್ತು. ಕುಡಿಯಲು ಹನಿ ನೀರು ಸಹ ಇರಲಿಲ್ಲ. ಇದನ್ನು ಗಮನಿಸಿದ ದಲಿತ ಸಂಘಟನಾಕಾರರು ಸತತ ಹೋರಾಟ ಮಾಡುವುದರ ಮೂಲಕ ಈ ಮಕ್ಕಳಿಗೆ ಕುಡಿವ ನೀರಿನ ವ್ಯವಸ್ಥೆ ಮಾಡಿ ಕೊಟ್ಟಿದ್ದಾರೆ.

ಹುಬ್ಬಳ್ಳಿ ತಾಲ್ಲೂಕಿನ ಗಿರಿಯಾಲ ಗ್ರಾಮದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ಕುಡಿಯುವ ನೀರು ಕೂಡ ಇರಲಿಲ್ಲಾ. ಇದರಿಂದ ಮಕ್ಕಳು ಕೂಡ ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದರು. ಇನ್ನು ಈ ವಿಷಯ ತಿಳಿಯುತ್ತಿದ್ದಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ ಧಾರವಾಡ ಜಿಲ್ಲಾ ಸಮಿತಿ ವತಿಯಿಂದ, ಗಿರಿಯಾಲದ ಡಾ. ಬಿ.ಆರ್. ಅಂಬೇಡ್ಕರ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಆಗ್ರಹಿಸಿ, ಕಳೆದ‌‌ 2 ದಿನಗಳ ಹಿಂದೆ ಕಟ್ನೂರ ಗ್ರಾ.ಪಂ. ಆವರಣದಲ್ಲಿ ಅನಿರ್ದಿಷ್ಟ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡಿದ್ದರಿಂದ ಕೂಡಲೇ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದು, ಮಕ್ಕಳು, ಶಿಕ್ಷಕರ ಮುಖದಲ್ಲಿ ಸಂತಸ ಮೂಡಿದೆ.

ಇನ್ನು ಡಾ.ಬಿ.ಆರ್. ಅಂಬೇಡ್ಕರ್ ಅನುದಾನಿತ ಪ್ರೌಢ ಶಾಲೆಯು, ಸರ್ಕಾರಿ ಅನುದಾನಕ್ಕೆ ಒಳಪಟ್ಟರೂ ಕೂಡ ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡಿದೆ. ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಕೂಡ ಸುದ್ದಿಯನ್ನು ಬಿತ್ತರಿಸಿತ್ತು. ಇನ್ನು ಕುಡಿಯುವ ನೀರು ಅಷ್ಟೇ ಅಲ್ಲದೇ ಉತ್ತಮವಾದ ಶೌಚಾಲಯ, ಕೊಠಡಿ ಹೀಗೆ ಹಲವಾರು ಸಮಸ್ಯೆಗಳನ್ನು ಬಗೆ ಹರಿಸಬೇಕೆಂದು ದಲಿತ ಸಂಘಟನೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ..

ಒಟ್ನಲ್ಲಿ ಈ ಶಾಲೆಗೆ ಇಷ್ಟು ವರ್ಷಗಳ ನಂತರ ಕುಡಿವ ನೀರು ಪೂರೈಸಿದ್ದರಿಂದ ಮಕ್ಕಳ ಗಂಗಾ ಮಾತೆಗೆ ಪೂಜೆ ಸಲ್ಲಿಸಿ, ಸಂತಸ ವ್ಯಕ್ತಿಪಡಿಸಿದ್ರು. ಸರ್ಕಾರ ಈ ಶಾಲೆಯತ್ತ ಗಮನ ಹರಿಸಿ ಇನ್ನೂ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಾಗಿದೆ...

-ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ..

Edited By : Shivu K
Kshetra Samachara

Kshetra Samachara

12/09/2022 03:44 pm

Cinque Terre

19 K

Cinque Terre

2

ಸಂಬಂಧಿತ ಸುದ್ದಿ