ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನೀಲಿಜಿನ್ ರಸ್ತೆ, ನ್ಯೂ ಕಾಟನ್ ಮಾರ್ಕೆಟ್ ಭಾಗದಲ್ಲಿ ಕೆಲ ರಸ್ತೆಗಳು ಬಂದ್

ಹುಬ್ಬಳ್ಳಿ: ರಾಣಿ ಚೆನ್ನಮ್ಮ ವೃತ್ತದಿಂದ ನೀಲಿಜಿನ್ ರಸ್ತೆ ಹಾಗೂ ನ್ಯೂ ಕಾಟನ್ ಮಾರ್ಕೆಟ್ ಭಾಗದಲ್ಲಿ ಕೆಲ ರಸ್ತೆಗಳನ್ನು ಕೇಂದ್ರ ರಸ್ತೆ ನಿಧಿ ಅಡಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಬೈಕ್ ಸವಾರರು ಹಾಗೂ ವಾಹನ ಚಾಲಕರು ಬದಲಿ ಮಾರ್ಗದಲ್ಲಿ ಸಂಚರಿಸಲು ಕೋರಲಾಗಿದೆ.

ಸದ್ಯ ಕಿಮ್ಸ್ ಹಿಂದಿನ ಗೇಟ್‌ನಿಂದ ಶಾರದಾ ಹೋಟೆಲ್‌ವರೆಗಿನ ರಸ್ತೆಯ ಕಾಮಗಾರಿ ಪ್ರಾರಂಭಿಸಲಾಗುತ್ತಿದೆ. ಹಾಗಾಗಿ ಕೆಲ ದಿನಗಳ ಮಟ್ಟಿಗೆ ಈ ರಸ್ತೆಯಲ್ಲಿ ಸಂಚರಿಸುವ ಬೈಕ್ ಸವಾರರು, ವಾಹನ ಚಾಲಕರು ಬೇರೆ ಮಾರ್ಗದಲ್ಲಿ ಸಂಚರಿಸಿ ಸಹಕಾರ ನೀಡಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

Edited By : Vijay Kumar
Kshetra Samachara

Kshetra Samachara

05/08/2022 09:13 am

Cinque Terre

25.28 K

Cinque Terre

0

ಸಂಬಂಧಿತ ಸುದ್ದಿ