ಹುಬ್ಬಳ್ಳಿ : ಸ್ಮಾರ್ಟ್ ಸಿಟಿಯ ಹೆಸರಿನ್ಯಾಗ್ ಮಂದಿ ರೊಕ್ಕಾ ಹೊಡದ್ ನಾಮಾ ಹಾಕಿ ಹೊಂಟಾರ್ ಇವರ್.... ನೋಡ್ರೀ... ಇಲ್ಲಿ ಮೂರ್ ವರ್ಷದಿಂದ ಟುಕ್ಕು ಟುಕ್ಕು ಅಂತ ಮಾಡಾಕುಂತಿರುವ ಕೆಲಸಕ್ಕ full ಬೆಂಕಿ ಹಚ್ಚಿ.... ದಡ್ಡಾ ದಡ್ಡ ಅಂತ ಮಾಡಾಕ್ ನಿಂತಾರ್....
ಆದ್ರ್ ಇಲ್ಲಿ ಒಂದ್ ಮಸ್ತ್ ಟ್ವಿಸ್ಟ್ ಐತಿರೀ.... ಇವತ್ತ್ ತರಾತುರಿನ್ಯಾಗ್ ರಸ್ತೆ ಬಾಜುಕ್ ಫಿವರ್ಸ್ ಹೊಂದಸಾಕುಂತಾರ್... ಆದ್ರ್ ಮಶ್ಕಿರಿ... ಏನ್ ಅಂದ್ರ್ ಇಡೀ ಲೈನ್ ಚಕ್ ಮಾಡಿದ್ರು... ನೀರ್ ಹೊಗಾಕ್ ಒಂದ್ ಕಡೆನೂ ಜಗಾ ಬಿಟ್ಟಿಲ್ಲ.... ಯಾಕ್ರೀ ಹಿಂಗ್ ಮಾಡತಿರ್ರೀ ಅಂತ್ ಕೇಳಿದ್ರ್ ... ಈ ಪೋಟೋ ನ್ಯಾಗಿರುವ ಪುಣ್ಯಾತ್ಮಾ... ಆಮೇಲೆ ಮತ್ತ್ ಈ ಕಲ್ಲ ತಗಿಸಿ ಆ ನೀರ್ ಹೊಗಾಕ್ ವ್ಯವಸ್ಥೆ ಮಾಡತೈವಿ ಅಂತಾರ್.... ವಾಃ... ರೇ.. ಜಾಣಾ.... ಏನ್ ಮಂದಿ ಕಣ್ಣಾಗ್ ಮಣ್ಣ ಹಾಕಿ .... Tax ರೊಕ್ಕಾ ಹಾಳ ಮಾಡಿ....
" ಊರದುಗೆ ಎಲ್ಲಾ... ಪಾನಿದು ಒಳಗೆ ನಿಲ್ಲುವಂಗ್ " ಮಾಡಾಕುಂತಿರಲ್ರೀ... ಶಕೀಲ್ ಅಹ್ಮದ್ ಸಾಹೇಬ್ರ್...
ಅಲ್ಲರೀ ನೀರ್ ಹೋಗಾಕ್ ಚಂಬರ್ ಹಾಕಿ ಆಮೇಲೆ ಪೀವರ್ಸ ಹೊಂದಿಸಿದ್ರ್ ಈ ಕೆಲಸಾ ಚೊಕ್ಕ ಆಗತ್ತಿತ್ತ್...
ಹ..... ತಡಿರೀ ಇದ್ ಅಷ್ಟ ಅಲ್ಲ.... ಇನ್ ಇದರ್ ತೆಳಗ್ ಇರೋ ಕೇಬಲ್ ಜಗಲಾರದ... ಮ್ಯಾಲೆ ಕಲ್ಲ ಹಾಕಿ... ಒಂದ್ ಪೋಟೋ ಹೋಡದ್ The smart city completed ಅಂತ್ Tax ರೊಕ್ಕಾ ಗುಳುಂ ಮಾಡುದ್....ಹಂಗ್ ಇದನ್ ಎಲ್ಲಾ ನೋಡಕೊಂತ ಬಾಯಿ ಮುಚ್ಚಕೊಂಡ್ ಕುಂತಿರುವ್ ಮಂದಿಗೆ.... ಇದ್ ಆಗ ಬೇಕಾಗಿದ್....
ಏನ್ ಅಧಿಕಾರಿಗಳೋ ಏನ್ planning ಗೋ...
-ಇಷ್ಟಲಿಂಗ ಪಾವಟೆ ಸ್ಪೇಷಲ್ ಬ್ಯುರೊ ಪಬ್ಲಿಕ್ ನೆಕ್ಸ್ಟ್
Kshetra Samachara
22/07/2022 04:02 pm