ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಮಲಕನಕೊಪ್ಪ ಟು ಜಿನ್ನೂರ ರಸ್ತೆ ಕೆಸರುಮಯ

ಕಲಘಟಗಿ: ತಾಲ್ಲೂಕಿನ ಮಲಕನಕೊಪ್ಪ ಗ್ರಾಮದದಿಂದ ಜಿನ್ನೂರ ಗ್ರಾಮಕ್ಕೆ ತೆರಳುವ ರಸ್ತೆ ಅಲ್ಲಲ್ಲಿ ಕೆಸರುಮಯವಾಗಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ.

ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಮತ್ತಷ್ಟು ತೆಗ್ಗು ಬಿದ್ದು ವಾಹನ ಸವಾರರು ಓಡಾಡಲು ಹರಸಾಹಸಪಡುತ್ತಿದ್ದಾರೆ. ಇದೇ ಮಾರ್ಗವಾಗಿ ದಿನನಿತ್ಯ ಶಾಲೆಗೆ ಹೋಗುವ ವಿದ್ಯಾರ್ಥಿಗಳು ಹಾಗೂ ಜಿನ್ನೂರ ಗ್ರಾಮ ಪಂಚಾಯತಿ ಕಚೇರಿಗೆ ತೆರಳಲು ಗ್ರಾಮಸ್ಥರು ಪಡುತ್ತಿರುವ ಕಷ್ಟ ಹೇಳತೀರದ್ದು.

ಹಲವು ದಿನಗಳಿಂದ ರಸ್ತೆ ಹದಗೆಟ್ಟರು ಸ್ಥಳಕ್ಕೆ ಯಾವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬಾರದೆ ನಿರ್ಲಕ್ಷ್ಯ ತೋರಿದ್ದು, ಈ ಕಡೆ ತಿರುಗಿ ಕೂಡ ನೋಡುತ್ತಿಲ್ಲ ಎಂದು ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ರಸ್ತೆ ಸುಧಾರಿಸಲು ಕ್ರಮ ಕೈಗೊಳ್ಳಬೇಕಾಗಿದೆ.

Edited By : Manjunath H D
Kshetra Samachara

Kshetra Samachara

17/07/2022 05:14 pm

Cinque Terre

59.02 K

Cinque Terre

2

ಸಂಬಂಧಿತ ಸುದ್ದಿ