ಹುಬ್ಬಳ್ಳಿ: ಕೇಂದ ಸರ್ಕಾರ ದಿನಬಳಕೆ ವಸ್ತುಗಳು ಮತ್ತು ತೈಲಗಳ ಬೆಲೆಯನ್ನು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇಂದಿ ಜೈ ಭೀಮ ಯುವ ಶಕ್ತಿ ಸೇನಾ ವತಿಯಿಂದ ನಗರದ ತಹಶೀಲ್ದಾರ್ ಕಚೇರಿ ಎದುರಿಗೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಹಾಕುತ್ತ ಪ್ರತಿಭಟನೆ ಮಾಡಿದರು.
ಕೇಂದ್ರ ಸರ್ಕಾರ ರಾಜ್ಯದಲ್ಲಿ ಡೀಸೆಲ್, ಅಡುಗೆ ಅನಿಲ, ಪೆಟ್ರೋಲ್, ಸೇರಿದಂತೆ ದಿನಬಳಕೆ ವಸ್ತಗಳ ಬೆಲೆಯನ್ನು ಏರಿಸಿದ್ದಾರೆ. ಇದರಿಂದ ಬಡವರು ಮಧ್ಯಮ ವರ್ಗದ ಜನರು ಹೇಗೆ ಜೀವನ ನಡೆಸಬೇಕು. ಈ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ತುಂಬಾ ಕಷ್ಟವಾಗಿದೆ ಕೂಡಲೆ ಕೇಂದ್ರ ಸರ್ಕಾರ ಈಗಾಗಲೇ ಏರಿಸಿದ ಬೆಲೆಯನ್ನು ಕಡಿಮೆ ಮಾಡಬೇಕೆಂದು ಒತ್ತಾಯಿಸಿ ತಹಶೀಲ್ದಾರರ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
Kshetra Samachara
14/07/2022 03:33 pm