ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಬ್ಯಾಹಟ್ಟಿ-ಹೆಬಸೂರ ರಸ್ತೆಗೆ ಅಭಿವೃದ್ಧಿ ಭಾಗ್ಯ; ಸಚಿವ ಮುನೇನಕೊಪ್ಪ ಚಾಲನೆ

ಪಬ್ಲಿಕ್ ನೆಕ್ಸ್ಟ್ ವರದಿ ಫಲಶ್ರುತಿ

ನವಲಗುಂದ: ನವಲಗುಂದ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಹುಬ್ಬಳ್ಳಿ ತಾಲ್ಲೂಕಿನ ಹೆಬಸೂರದಿಂದ ಬ್ಯಾಹಟ್ಟಿ ವರೆಗಿನ ರಸ್ತೆ ಹದಗೆಟ್ಟು ವರ್ಷಗಳೇ ಕಳೆದಿತ್ತು. ಈ ಬಗ್ಗೆ ʼಪಬ್ಲಿಕ್ ನೆಕ್ಸ್ಟ್ʼ ಕೂಡ ಹಲವು ಬಾರಿ ಸುದ್ದಿ ಬಿತ್ತರಿಸಿತ್ತು. ಈಗ ಈ ರಸ್ತೆಗೆ ಅಭಿವೃದ್ಧಿ ಭಾಗ್ಯ ಒದಗಿ ಬಂದಿದ್ದು, ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕಾಮಗಾರಿಗೆ ಚಾಲನೆ ನೀಡಿದರು.

ಈ ರಸ್ತೆ ದುರಸ್ತಿಗಾಗಿ ಕಳೆದ ತಿಂಗಳು ಬ್ಯಾಹಟ್ಟಿ ಗ್ರಾಮದಿಂದ ಹೆಬಸೂರ ಗ್ರಾಮದವರೆಗೆ ಧಾರವಾಡ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ ಕುದುರೆ ಏರಿ ವಿನೂತನವಾಗಿ ಪ್ರತಿಭಟನೆ ಮಾಡಿದ್ದರು. ಹದಗೆಟ್ಟ ರಸ್ತೆಯಿಂದಾಗಿ ಬಸ್ ಸೇರಿದಂತೆ ಕಾರು, ದ್ವಿಚಕ್ರ ವಾಹನ, ಇತರ ವಾಹನಿಗರು ಸಂಚರಿಸಲು ಪರದಾಟ ನಡೆಸಬೇಕಿತ್ತು.

ಈಗ ಲೋಕೋಪಯೋಗಿ ಇಲಾಖೆ ವತಿಯಿಂದ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಹಂತ 4ರ ಅನುದಾನದಡಿ ರಾ.ಹೆ.-28ರ ರಸ್ತೆ 84.70ರಿಂದ 99.30 ಕಿ.ಮೀ. ವರೆಗೆ ಅಂದಾಜು ಮೊತ್ತ 10 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಆರಂಭವಾಗಿದ್ದು, ಗ್ರಾಮಸ್ಥರು ಹಾಗೂ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.

- ವಿನೋದ ಇಚ್ಚಂಗಿ ʼಪಬ್ಲಿಕ್ ನೆಕ್ಸ್ಟ್ʼ ನವಲಗುಂದ

Edited By : Manjunath H D
Kshetra Samachara

Kshetra Samachara

23/06/2022 02:22 pm

Cinque Terre

14.34 K

Cinque Terre

1

ಸಂಬಂಧಿತ ಸುದ್ದಿ