ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ : ಕಳಪೆ ಕಾಮಗಾರಿಗೆ ಸಾಕ್ಷಿಯಾಯಿತಾ ಹುಲಿಕೇರಿ ಕೆರೆ ತಡೆ ಗೋಡೆ ಕಾರ್ಯ.

ಅಳ್ನಾವರ : ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಹುಲಿಕೇರಿ ಕೆರೆ ತಡೆ ಗೋಡೆಯ ಕಾರ್ಯವು ಸಂಪೂರ್ಣ ಕಳಪೆ ಕಾಮಗಾರಿ ಯಾಗುತ್ತಿದೆ ಎಂದು ಅಲ್ಲಿನ ಸಾರ್ವಜನಿಕರು ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಕಳೆದೆರಡು ವರ್ಷಗಳ ಹಿಂದೆ ರಾಜ್ಯಾದ್ಯಂತ ಸುದ್ದಿಯಾದ ಸ್ಥಳವಿದು.ಅಕಾಲಿಕ ಮಳೆಗೆ ಎಲ್ಲಿಲ್ಲದ ನೀರು ಬಂದು ಹುಲಿಕೇರಿ ಇಂದಿರಮ್ಮನ ಕೆರೆ ಕಟ್ಟೆ ಒಡೆದು ಸಾವಿರಾರು ರೈತರ, ಸಾರ್ವಜನಿಕರ ಜನ ಜೀವನವನ್ನ ಬೀದಿಗೆ ಬರುವಂತೆ ಮಾಡಿತ್ತು.ಇದನ್ನರಿತ ಸರ್ಕಾರ ಕೇಂದ್ರದಿಂದ ತಂಡವೊಂದನ್ನು ಸ್ಥಳಕ್ಕೆ ಕಳುಹಿಸಿ ಸ್ಥಳ ಪರಿಶೀಲನೆ ಮಾಡಿ ಸುಮಾರು ಒಂಬತ್ತು ಕೋಟಿ ಹಣವನ್ನ ಇಂದಿರಮ್ಮನ ಕೆರೆ ಕಟ್ಟೆ ಪುನರ್ ನಿರ್ಮಾಣಕ್ಕೆ ಮುದ್ರೆ ಒತ್ತಿತು.

ಇದೀಗ ಅದರ ಕಾರ್ಯ ಪ್ರಾರಂಭ ವಾಗಿದೆ.ಆದರೆ ಕೆಲಸ ಮಾತ್ರ ಸಂಪೂರ್ಣ ಕಳಪೆ ಯಾಗುತ್ತಿದೆ.ಇಪ್ಪತ್ತೈದು ಮೀಟರ್ ನಷ್ಟು ಆಳ ತಗೆದು ಕೆಳಗಿಂದ ಕಾಂಕ್ರಿಟ್ ಹಾಕಿ ಅದನ್ನ ಭದ್ರಗೊಳಿಸಬೇಕಿತ್ತು, ಆದರೆ ಕೆಲವೊಂದು ಕಡೆ ಮಾತ್ರ ಆಳ ತೆಗೆದು ಕೆಲಸ ಮಾಡುತ್ತಿದ್ದಾರೆ.ಹೊರಬಾಜು ರಾಡ್ ಗಳನ್ನ ಇಟ್ಟು ಕೆಳಗಿಂದ ಎಂಸ್ಯಾಂಡ್ ಸಿಮೆಂಟ್ ಸಣ್ಣ ಕಡಿಯನ್ನ ಭರ್ತಿ ಮಾಡುತ್ತಿದ್ದಾರೆ.ಇದರಿಂದ ಮತ್ತೆ ಅನಾಹುತ ಸಂಭವಿಸುವ ಎಲ್ಲಾ ಸಾಧ್ಯತೆಗಳಿವೆ ಎಂದು ಅಲ್ಲಿನ ಸಾರ್ವಜನಿಕರು ಹೇಳುತ್ತಿದ್ದಾರೆ.

ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು,ಇಂಜಿನಿಯರ್ ಗಳು ಸ್ಥಳಕ್ಕೆ ಬಂದು ಗುಣಮಟ್ಟದ ಕೆಲಸ ವಾಗುವಂತೆ ನೋಡಿಕೊಳ್ಳುತ್ತಾರಾ ಕಾದು ನೋಡಬೇಕಿದೆ.

-ಮಹಾಂತೇಶ ಪಠಾಣಿ ಪಬ್ಲಿಕ್ ನೆಕ್ಸ್ಟ್ ಅಳ್ನಾವರ.

Edited By : Shivu K
Kshetra Samachara

Kshetra Samachara

21/06/2022 11:27 am

Cinque Terre

36.67 K

Cinque Terre

1

ಸಂಬಂಧಿತ ಸುದ್ದಿ