ಹುಬ್ಬಳ್ಳಿ; ಹುಬ್ಬಳ್ಳಿಯ ವಿಮಾನ ನಿಲ್ದಾಣ ಹಾಗೂ ಸಿಬಿಟಿ ಬಸ್ ನಿಲ್ದಾಣ ನಡುವಿನ ಬಸ್ ಸಾರಿಗೆ ಸೇವೆಗೆ ವಾ.ಕ.ರ.ಸಾ.ಸಂಸ್ಥೆಯ
ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ಬಸಲಿಂಗಪ್ಪ ಬೀಡಿ, ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದಕುಮಾರ ಠಾಕರೆ ಅವರು ಚಾಲನೆ ನೀಡಿದರು.
ವಿಮಾನ ನಿಲ್ದಾಣದಿಂದ ಸಿಬಿಟಿ, ರೈಲ್ವೆ ನಿಲ್ದಾಣಕ್ಕೆ ರೂ. 25, ವಿಮಾನ ನಿಲ್ದಾಣದಿಂದ ಹಳೆ ಬಸ್ ನಿಲ್ದಾಣಕ್ಕೆ ರೂ. 20 ಮತ್ತು ವಿಮಾನ ನಿಲ್ದಾಣದಿಂದ ಹೊಸ ಬಸ್ ನಿಲ್ದಾಣಕ್ಕೆ ರೂ.15 ನಿಗದಿ ಪಡಿಸಲಾಗಿದೆ ಎಂದು ವಾಕರಸಾಸಂ ಅಧಿಕಾರಿ ಬಸವಲಿಂಗಪ್ಪ ಬೀಡಿ ತಿಳಿಸಿದರು.
Kshetra Samachara
03/06/2022 07:32 pm