ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ದಶಕವೇ ಕಳೆಯುತ್ತ ಬಂದರೂ ಪೂರ್ಣಗೊಳ್ಳದ ಯೋಜನೆ: ಸಾರ್ವಜನಿಕರು ಹೈರಾಣ...!

ಹುಬ್ಬಳ್ಳಿ: ಹತ್ತು ವರ್ಷಗಳನ್ನು ಪೂರೈಸುತ್ತಾ ಬಂದರೂ ಪೂರ್ಣಗೊಳ್ಳದ ಯೋಜನೆ. ಈ ಯೋಜನೆ ಅದೆಷ್ಟೋ ಭರವಸೆಯನ್ನು ಹುಸಿ ಮಾಡಿದೆ. ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಯೋಜನೆಗೆ ಅಡಿಪಾಯ ಹಾಕಿ ಹತ್ತು ವರ್ಷ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಪೂರ್ಣಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಅಷ್ಟಕ್ಕೂ ಯಾವುದು ಆ ಮಹತ್ವದ ಯೋಜನೆ ಅಂತೀರಾ ಈ ಸ್ಟೋರಿ ನೋಡಿ..

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವಪೂರ್ಣ ಯೋಜನೆಯಲ್ಲಿ ಒಂದಾಗಿರುವ ಬಿ.ಆರ್.ಟಿ.ಎಸ್ ಯೋಜನೆಯು 2013ರಲ್ಲಿ ಆರಂಭವಾಗಿದ್ದು, 2023 ಸಮೀಪಿಸುತ್ತಾ ಬಂದರೂ ಇನ್ನೂ ಕೂಡ 100% ಕಾಮಗಾರಿ ಪೂರ್ಣಗೊಂಡಿಲ್ಲ.

600 ಕೋಟಿ ಅನುದಾನದಿಂದ ಆರಂಭಗೊಂಡ ಬಿ.ಆರ್.ಟಿ.ಎಸ್ ನೂರು ಕೋಟಿ ಅನುದಾನ ವೆಚ್ಚವಾದರೂ ಕೂಡ ಕಾಮಗಾರಿ ಮಾತ್ರ ಕಂಪ್ಲಿಟ್ ಆಗಿಲ್ಲ. ಅಲ್ಲದೇ ನವಲೂರ ಗ್ರಾಮದ ಬಳಿ ಬಿ.ಆರ್.ಟಿ.ಎಸ್ ಅವ್ಯವಸ್ಥೆ ಹುಟ್ಟು ಹಾಕಿದ್ದು, ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಬಿಜೆಪಿ ನೇತೃತ್ವದ ಸರ್ಕಾರ ಇಂತಹದೊಂದು ಮಹತ್ವದ ಯೋಜನೆಯನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದೇ ಇರುವ ಹಿನ್ನೆಲೆಯಲ್ಲಿ ಮಹತ್ವದ ಯೋಜನೆ ಅವಧಿ ಮುಗಿದರೂ ಪೂರ್ಣಗೊಂಡಿಲ್ಲ. ಅಲ್ಲದೇ ಸಾರ್ವಜನಿಕರಿಗೆ ವರವಾಗಬೇಕಿದ್ದ ಯೋಜನೆ ಈಗ ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಕೊಟ್ಟಿದ್ದರೂ ಪೂರ್ಣಗೊಳ್ಳುವಲ್ಲಿ ಕುಂಟುತ್ತಾ ಸಾಗಿರುವುದು ನಿಜಕ್ಕೂ ಜನರಲ್ಲಿ ಬೇಸರದ ಭಾವನೆ ಹುಟ್ಟು ಹಾಕಿದೆ.

ಒಟ್ಟಿನಲ್ಲಿ ಸರ್ಕಾರ ಯಾವುದೇ ಯೋಜನೆ ತಂದರೂ ಸರಿಯಾಗಿ ನಿರ್ವಹಣೆ ಮಾಡದೇ ಇರುವುದು ಇಂತಹದೊಂದು ಅವ್ಯವಸ್ಥೆಗೆ ಕಾರಣವಾಗಿದೆ. ಇನ್ನಾದರೂ ವ್ಯವಸ್ಥೆ ಸರಿಪಡಿಸಿ ಯೋಜನೆ ಪೂರ್ಣಗೊಳಸಬೇಕಿದೆ.

Edited By : Manjunath H D
Kshetra Samachara

Kshetra Samachara

21/05/2022 09:43 pm

Cinque Terre

33.57 K

Cinque Terre

17

ಸಂಬಂಧಿತ ಸುದ್ದಿ