ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಬುದ್ಧ ಬಸವ ಅಂಬೇಡ್ಕರ್ ಜಯಂತಿ ರಂಜಾನ್ ಪ್ರಯುಕ್ತ ನೇತ್ರದಾನ ಸಂಕಲ್ಪ

ಹುಬ್ಬಳ್ಳಿ : ನಗರದ ಉಣಕಲ್'ನಲ್ಲಿರುವ ಟೀಚರ್ಸ್ ಕಾಲೋನಿಯ ನಾಮದೇವ ಸಂತ ಭವನದಲ್ಲಿ ಬುದ್ಧ ಬಸವ ಅಂಬೇಡ್ಕರ್ ಜಯಂತಿ ಹಾಗೂ ರಂಜಾನ್ ಪ್ರಯುಕ್ತ ನೇತ್ರದಾನ ಸಂಕಲ್ಪ ಕಾರ್ಯಕ್ರಮವನ್ನು ಆರ್.ಕೆ.ಟೈಗರ್ಸ್ ಸ್ಪೋರ್ಟ್ಸ್ ಕ್ಲಬ್, ಹಾಗೂ ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ ವತಿಯಿಂದ ರಮೇಶ್ ಕಾಂಬಳೆಯವರ ಮಾರ್ಗದರ್ಶನದಲ್ಲಿ ಮತ್ತು ಕಿರಣ ಪವಾರರವರ ಸಾರಥ್ಯದಲ್ಲಿ ಎಸ್.ಜಿ.ಎಂ.ಐ ಬ್ಯಾಂಕ್ ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಊರಿನ ಗಣ್ಯ ವ್ಯಕ್ತಿಗಳು, ಗುರು ಹಿರಿಯರು ಯುವಕರು ಹಾಗೂ ಎಲ್ಲಾ ವರ್ಗದ ಜನರು ಸೇರಿ ಕೋಮು ಸೌಹಾರ್ದತೆಯ ಸಂಕೇತವಾಗಿ ಆಚರಿಸಿದರು.

ಆ ಮೂಲಕ ಎಲ್ಲಾ ಜನಾಂಗದ ಯುವಕರು ಮಹಿಳೆಯರು ಸೇರಿದಂತೆ ನೂರಾರು ಜನರು ತಮ್ಮ ನೇತ್ರವನ್ನು ದಾನ ಮಾಡುವುದಾಗಿ ಸಂಕಲ್ಪ ಮಾಡಿ ದೇಶದಲ್ಲಿರುವ ಅಂಧತ್ವ ನಿವಾರಣೆ ಮಾಡಲು ತಮ್ಮ ಸಹಕಾರ ತೋರಿದರು.

ಈ ಸಂದರ್ಭದಲ್ಲಿ ಅತಿಥಿಗಳಾಗಿ ರಾಜಣ್ಣ ಕೊರವಿ, ಅಮೃತ ಇಜಾರಿ, ಗಣೇಶ್ ದೊಡ್ಡಮನಿ, ರವೀಂದ್ರ ಕಲ್ಯಾಣಿ, ರಫೀಕ್ ದೊಡ್ಡಮನಿ, ರವಿಚಂದ್ರ ಬಾಲೇಹೊಸೂರು, ಡಾ.ಲಿಂಗರಾಜ್ ಬಿಳೆಕಲ್ ಹಾಗೂ ನೇತ್ರ ತಜ್ಞರಾದ ಡಾ.ರಾಜಶೇಖರ್ ಹಾದಿಮನಿ, ವೆಂಕರೆಡ್ಡಿ ಕಿರೇಸೂರ, ಮಲ್ಲಪ್ಪ ತಡಸದ ಆಗಮಿಸಿದ್ದರು. ಮಂಜುನಾಥ.ಹೊಸಮನಿ, ಶಿವಾನಂದ.ಸೂರ್ಯವಂಶಿ, ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

16/05/2022 09:42 pm

Cinque Terre

4.56 K

Cinque Terre

0

ಸಂಬಂಧಿತ ಸುದ್ದಿ