ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಅಂತ್ಯಸಂಸ್ಕಾರಕ್ಕೂ ಸ್ಥಳವಿಲ್ಲದೆ ಬ್ಯಾಲ್ಯಾಳ ಗ್ರಾಮಸ್ಥರ ಪರದಾಟ

ನವಲಗುಂದ: ಗ್ರಾಮೀಣ ಭಾಗದಲ್ಲಿ ಒಂದಲ್ಲಾ ಒಂದು ಸಮಸ್ಯೆಗಳಿಂದ ಗ್ರಾಮಸ್ಥರು ಬಳಲುತ್ತಲೇ ಇರುತ್ತಾರೆ. ಈಗ ನವಲಗುಂದ ತಾಲ್ಲೂಕಿನ ಬ್ಯಾಲ್ಯಾಳ ಗ್ರಾಮದ ಗ್ರಾಮಸ್ಥರು ಸಹ ಒಂದು ದೊಡ್ಡ ಸಮಸ್ಯೆಯಿಂದಲೇ ಪರದಾಟ ನಡೆಸಿದ್ದಾರೆ. ಹಾಗಾದರೆ ಯಾವ ತೊಂದರೆ ಅಂತೀರಾ ನೀವೇ ನೋಡಿ.

ಬ್ಯಾಲ್ಯಾಳ ಗ್ರಾಮದ ಯಲ್ಲಮ್ಮ ಮಂಟೂರು ಎಂಬ ಮಹಿಳೆ ಸಾವನ್ನಪ್ಪಿದ ಹಿನ್ನೆಲೆ ಅಂತ್ಯಸಂಸ್ಕಾರಕ್ಕೆ ಮುಂದಾದ ಕುಟುಂಬಸ್ಥರಿಗೆ ಅಂತ್ಯಸಂಸ್ಕಾರ ಮಾಡಲು ಸ್ಥಳವೇ ಇಲ್ಲದಂತಾಗಿತ್ತು. ಯಾಕೆಂದರೆ ಕಳೆದ ಕೆಲ ವರ್ಷಗಳಿಂದ ಗ್ರಾಮಸ್ಥರೊಬ್ಬರ ಹೊಲದಲ್ಲಿ ಶವ ಹೂಳಲಾಗುತಿತ್ತು. ಈಗ ಹೊಲದ ಮಾಲೀಕರು ಅಂತ್ಯಸಂಸ್ಕಾರ ಮಾಡಲು ಅನುಮತಿ ನೀಡದ ಕಾರಣ ಈ ಶವವನ್ನು ಇಟ್ಟು ಕುರುವಂತಹ ದುಸ್ಥಿತಿ ಬಂದೋದಾಗಿದೆ.

ಇನ್ನು ಒಂದು ಗ್ರಾಮ ಅಂದಮೇಲೆ ತಾಲೂಕ ಆಡಳಿತ ಅಥವಾ ಸ್ಥಳೀಯ ಶಾಸಕರು ಮುತುವರ್ಜಿ ವಹಿಸಿ, ಅಂತ್ಯ ಸಂಸ್ಕಾರಕ್ಕೆಂದು ಸರ್ಕಾರಿ ಜಾಗವನ್ನು ನೀಡಿದ್ದರೆ ಈಗ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂಬುದು ಗ್ರಾಮಸ್ಥರ ಅಳಲು. ಈಗಾಗಲೇ ಅಂತ್ಯಸಂಸ್ಕಾರಕ್ಕೆ ಸರ್ಕಾರಿ ಜಾಗೆಗಾಗಿ ಸಾಕಷ್ಟು ಬಾರಿ ಗ್ರಾಮಸ್ಥರು ಮನವಿ ಮಾಡಿದ್ದರೂ ಸಹ ಇದುವರೆಗೂ ಅಧಿಕಾರಿಗಳು ಹಾಗೂ ಜನಪ್ರತಿನಿದಿಗಳು ತಲೆ ಕೆಡಿಸಿಕೊಂಡಿಲ್ಲ ಎಂಬ ಆರೋಪ ಸಹ ಕೇಳಿ ಬರುತ್ತಿದೆ.

Edited By : Shivu K
Kshetra Samachara

Kshetra Samachara

24/04/2022 05:03 pm

Cinque Terre

48.04 K

Cinque Terre

0

ಸಂಬಂಧಿತ ಸುದ್ದಿ