ನವಲಗುಂದ: ಸಾಲು ಸಾಲು ಅಂಗಡಿಗಳು, ಮನೆಗಳು. ದಿನಕ್ಕೆ ನೂರಾರು ಜನ ಸಂಚರಿಸುವ ಪ್ರಮುಖ ರಸ್ತೆ. ಇದು ನವಲಗುಂದ ಪಟ್ಟಣದ ರಾಜ ಭವನದ ಬಳಿಯ ಚಿತ್ರಣ. ಈ ನಡುವೆ ರಸ್ತೆ ಪಕ್ಕದಲ್ಲಿನ ಚರಂಡಿಯ ಅವ್ಯವಸ್ಥೆಯಿಂದಾಗಿ ಸ್ಥಳೀಯರು ಹತ್ತಾರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಪುರಸಭೆ ಅಧಿಕಾರಿಗಳು ಒಂಚೂರು ತಲೆ ಕೆಡಿಸಿಕೊಳ್ಳುತ್ತಲೇ ಇಲ್ಲ ಅಂತಾರೆ ಸಾರ್ವಜನಿಕರು.
ಅದು ನಗರಗಳಾಗಲಿ, ತಾಲೂಕು ಪಟ್ಟಣಗಳಾಗಲಿ ಅಥವಾ ಗ್ರಾಮವೇ ಆಗಿರಲಿ ಅಲ್ಲಿ ಸಾರ್ವಜನಿಕರಿಗೆ ಮಾತ್ರ ಕೊಳಚೆಯ ಸಮಸ್ಯೆ ತಪ್ಪುವುದೇ ಇಲ್ಲ. ಇದಕ್ಕೆ ಉತ್ತಮ ಉದಾಹರಣೆ ಅಂದ್ರೆ, ನವಲಗುಂದ ಪಟ್ಟಣದ ರಾಜ ಭವನದ ಬಳಿಯ ಚರಂಡಿಯ ಅವ್ಯವಸ್ಥೆ. ಇದರಿಂದಾಗಿ ಕಳೆದ ಏಳೆಂಟು ತಿಂಗಳುಗಳಿಂದ ಸ್ಥಳೀಯರು ಅನುಭವಿಸುತ್ತಿರುವ ಸಂಕಷ್ಟ ಸಾಕಷ್ಟು.
ಈ ಬಗ್ಗೆ ಪುರಸಭೆ ಅಧಿಕಾರಿಗಳು ಗಮನ ಹರಿಸಿ, ಸಾರ್ವಜನಿಕರ ಸಂಕಷ್ಟಕ್ಕೆ ಧ್ವನಿಯಗಬೇಕು ಎಂಬುದು ಸ್ಥಳೀಯರ ಅಹವಾಲು. ಕೂಡಲೇ ಸಂಪೂರ್ಣವಾಗಿ ಚರಂಡಿಯ ಕೊಳಚೆ ಹೊರ ಹಾಕಿ, ನೀರು ಸರಾಗವಾಗಿ ಹರಿದು ಹೋಗಲು ಸುವ್ಯವಸ್ಥೆ ಮಾಡಿ ಕೊಡಬೇಕಾಗಿದೆ.
- ವಿನೋದ ಇಚ್ಚಂಗಿ, ʼಪಬ್ಲಿಕ್ ನೆಕ್ಸ್ಟ್ʼ ನವಲಗುಂದ
Kshetra Samachara
24/04/2022 03:55 pm