ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್ ; ಎಚ್ಚೆತ್ತುಕೊಂಡ ಅಧಿಕಾರಿಗಳು

ನವಲಗುಂದ : ಪಟ್ಟಣದ ಬಸ್ ನಿಲ್ದಾಣದ ಅವ್ಯವಸ್ಥೆ ಕುರಿತು ನಿಮ್ಮ ಪಬ್ಲಿಕ್ ನೆಕ್ಸ್ಟ್ ಈಗಾಗಲೇ ಸಾಕಷ್ಟು ಬಾರಿ ಸುದ್ದಿ ಬಿತ್ತರಿಸಿತ್ತು. ಅಷ್ಟೇ ಅಲ್ಲದೆ ಕಳೆದ ವಾರ ಸಾರ್ವಜನಿಕರಿಂದ ಬಸ್ ತಡೆದು ಪ್ರತಿಭಟನೆಯನ್ನು ಸಹ ನಡೆಸಲಾಗಿತ್ತು.

ಸದ್ಯ ಇದೆಲ್ಲದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಬಸ್ ನಿಲ್ದಾಣದ ಸ್ವಚ್ಛತೆ ಹಾಗೂ ಶೌಚಾಲಯದ ದುರಸ್ಥಿ ಕೆಲಸ ಮಾಡಿಸಿದ್ದಾರೆ.

ಈ ಸ್ವಚ್ಛತೆ ಈಗಷ್ಟೆ ಸೀಮಿತವಾಗದೆ. ನಿಲ್ದಾಣದ ಸ್ವಚ್ಛತೆಯ ನಿರ್ವಹಣೆ ಮಾಡಿ, ಬಯಲು ಮೂತ್ರ ಮಾಡುವವರಿಗೆ ಎಚ್ಚರಿಕೆ ನೀಡಿ, ಸ್ವಚ್ಛತೆ ಕಾಪಾಡಬೇಕಿದೆ. ಒಟ್ಟಾರೆಯಾಗಿ ಇಷ್ಟು ದಿನಗಳಿಂದ ಬಸ್ ನಿಲ್ದಾಣದ ಅವ್ಯವಸ್ಥೆಯಿಂದ ಕಂಗೆಟ್ಟ ಪ್ರಯಾಣಿಕರು ಹಾಗೂ ಸ್ಥಳೀಯರು ಈಗ ನಿಟ್ಟುಸಿರು ಬಿಡುವಂತಾಗಿದೆ.

Edited By : Shivu K
Kshetra Samachara

Kshetra Samachara

03/04/2022 02:08 pm

Cinque Terre

26.17 K

Cinque Terre

2

ಸಂಬಂಧಿತ ಸುದ್ದಿ