ಕಲಘಟಗಿ: ಮನು ವಿಕಾಸ ಸಂಸ್ಥೆಯಿಂದ ಕಲಘಟಗಿ ತಾಲೂಕಿನ ಸಂಗೆದೇವರಕೊಪ್ಪ ಗ್ರಾಮದ ಎರಿ ಕೆರೆಯ ಹೂಳೆತ್ತುವ ಕಾಮಗಾರಿ
ಚಾಲನೆ ನೀಡಲಾಯಿತು.
ಈ ವೇಳೆ ಮಾತನಾಡಿದ ಮನು ವಿಕಾಸ ಸಂಸ್ಥೆಯ ನಿರ್ದೇಶಕ ಗಣಪತಿ ಭಟ್, 'ಕೆರೆಗಳ ಹೂಳು ತೆಗೆಯುವುದರಿಂದ ಮಳೆಗಾಲದಲ್ಲಿ ಹೆಚ್ಚಿನ ನೀರು ಸಂಗ್ರಹವಾಗುವುದರಿಂದ ಅಂತರ್ಜಲ ಹೆಚ್ಚುತ್ತದೆ. ಜೊತೆಗೆ ಅಂತರ್ಜಲಮಟ್ಟ ಹೆಚ್ಚಾಗಿ ಕೊಳಗೆ ಬಾವಿಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ಸಿಗುತ್ತದೆ. ಕೃಷಿಗೆ ಅನುಕೂಲವಾಗುತ್ತದೆ' ಎಂದರು.
ಈ ಸಂದರ್ಭದಲ್ಲಿ ಮನುವಿಕಾಸ ಸಂಸ್ಥೆಯ ಎಂ.ಜಿ ಹೆಗಡೆ, ಗ್ರಾಮ ಪಂಚಾಯತಿ ಸದಸ್ಯರಾದ ಸಿದ್ದಪ್ಪ ವಿಜಾಪುರ, ಮಂಜುನಾಥ ಹೊಸಮನಿ, ಸಂಗಪ್ಪ ತಳವಾರ, ಊರಿನ ಹಿರಿಯರಾದ ಶಿವಪ್ಪ ಚಿಮಣಿ, ಚನ್ನಪ್ಪ ರಾಮನಾಳ, ಮಲ್ಲೆಶಪ್ಪ ಕಂಠೆಪ್ಪನವರ, ಸುರೇಶ್ ಉಗ್ನಿಕೆರಿ ಇದ್ದರು.
Kshetra Samachara
29/03/2022 05:07 pm