ನವಲಗುಂದ : ನವಲಗುಂದ ಪಟ್ಟಣದ ಚಾವಡಿಯಿಂದ ಅಂಬೇಡ್ಕರ ನಗರಕ್ಕೆ ಹೋಗುವ ರಸ್ತೆಯನ್ನು ಸ್ಥಳೀಯರು ಅತಿಕ್ರಮಣ ಮಾಡಿದ್ದಾರೆ ಎಂದು ಪ್ರತಿಭಟನೆಗೆ ಇಳಿದ ಘಟನೆ ಸೋಮವಾರ ಸಂಜೆ ನಡೆದಿತ್ತು.
ಈ ಹಿನ್ನೆಲೆಯಲ್ಲಿ ಮಂಗಳವಾರ ಪುರಸಭೆ ಮುಖ್ಯಾಧಿಕಾರಿ ವೀರಪ್ಪ ಹಸಬಿ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಂಡಿದ್ದಾರೆ.
ಇನ್ನು ರಸ್ತೆಯಲ್ಲಿ ಚಕ್ಕಡಿ, ಟ್ರ್ಯಾಕ್ಟರಿನ ಟ್ರೇಲರ್, ಕಲ್ಲು, ಉಸುಕು ಸೇರಿದಂತೆ ವಾಹನಗಳ ನಿಲುಗಡೆಯಿಂದ ಬಂದೋದಗಿದ್ದ ಸಂಕಷ್ಟಕ್ಕೆ ಸಂಬಂಧಿಸಿದಂತೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿ ಬಿತ್ತರಿಸಿತ್ತು.
ಸದ್ಯ ಪುರಸಭೆ ಮುಖ್ಯಾಧಿಕಾರಿ ಸೂಕ್ತ ಕ್ರಮ ಕೈಗೊಂಡು ಇನ್ಮುಂದೆ ಸಂಚಾರಕ್ಕೆ ತೊಂದರೆಯಾಗುವಂತೆ ರಸ್ತೆ ಬಳಸದಂತೆ ಸ್ಥಳೀಯರಿಗೆ ಎಚ್ಚರಿಕೆ ನೀಡಿದರು.
ಒಟ್ಟಿನಲ್ಲಿ ಪಬ್ಲಿಕ್ ನೆಕ್ಸ್ಟ್ ವರದಿಯಿಂದ ಅಧಿಕಾರಿಗಳು ಕ್ರಮ ಕೈಗೊಂಡಿದ್ದಕ್ಕೆ ಜನ ಪಬ್ಲಿಕ್ ನೆಕ್ಸ್ಟ್ ಗೆ ಧನ್ಯವಾದ ಎಂದಿದ್ದಾರೆ.
Kshetra Samachara
22/03/2022 08:05 pm