ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಚರಂಡಿ ನೀರು ರಸ್ತೆಗೆ- ಸ್ಥಳೀಯರ ಪರದಾಟ ಹೇಳತೀರದ್ದು

ನವಲಗುಂದ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಈಗ ನವಲಗುಂದ ಪಟ್ಟಣದ ಸಿದ್ಧಲಿಂಗೇಶ್ವರ ನಗರದ ವಾರ್ಡ್ ನಂಬರ್ 13ರ ಸ್ಥಳೀಯರು ಪರದಾಟ ನಡೆಸುವಂತಾಗಿದೆ.

ಹೌದು. ಪಟ್ಟಣದ ಹೃದಯ ಭಾಗದಲ್ಲಿರುವ ಸಿದ್ಧಲಿಂಗೇಶ್ವರ ನಗರದ ವಿಠಲ ದೇವಸ್ಥಾನದ ಪಕ್ಕದಲ್ಲಿ ಚರಂಡಿ ಬ್ಲಾಕ್ ಆಗಿದೆ. ಪರಿಣಾಮ ಸಂಪೂರ್ಣ ನೀರು ರಸ್ತೆ ಮೇಲೆ ಸುಮಾರು 200 ಮೀಟರ್ ಉದ್ದಕ್ಕೂ ಹರಿಯುತ್ತಿದೆ. ಇದರಿಂದಾಗಿ ಸ್ಥಳೀಯರು ಮೂಗು ಮುಚ್ಚಿಕೊಂಡು ಸಂಚರಿಸುವ ಪರಿಸ್ಥಿತಿ ಬಂದೊದಗಿದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಕೆಲಸ ಆಗಿಲ್ಲ ಎಂದು ಸ್ಥಳೀಯರು ಆರೋಪಿಸಿ, ಆಕ್ರೋಶ ಹೊರಹಾಕುತ್ತಿದ್ದಾರೆ.

Edited By : Shivu K
Kshetra Samachara

Kshetra Samachara

21/02/2022 10:27 am

Cinque Terre

34.95 K

Cinque Terre

0

ಸಂಬಂಧಿತ ಸುದ್ದಿ