ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಹುಬ್ಬಳ್ಳಿ ಧಾರವಾಡ ಅಂದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಎಲ್ಲಿಲ್ಲದ ಪ್ರೀತಿ. ಸಾಕಷ್ಟು ಯೋಜನೆಯನ್ನು ಜಾರಿಗೆ ತಂದು ಭೂಮಿ ಪೂಜೆ ಮಾಡುತ್ತಾರೆ. ಆದರೆ ವಿಪರ್ಯಾಸದ ಸಂಗತಿ ಅಂದರೆ ಪೂಜೆ ಪುನಸ್ಕಾರ ಎಲ್ಲ ಸರಿಯಾಗಿ ಇರುತ್ತದೆ. ವಿನಃ ಕೆಲಸ ಮಾತ್ರ ಅಚ್ಚುಕಟ್ಟಾಗಿ ಇರೋದೇ ಇಲ್ಲ.
ಸ್ಮಾರ್ಟ್ ಸಿಟಿ, ಪ್ಲೈಓವರ್ ನಿರ್ಮಾಣ, ಸಿ.ಆರ್.ಎಫ್ ಅನುದಾನದಲ್ಲಿ ರಸ್ತೆ ಚರಂಡಿ ನಿರ್ಮಾಣದ ಕಾರ್ಯ ನಡೆಯುತ್ತಿದೆ. ಆದರೆ ಕಾಮಗಾರಿ ಮಾತ್ರ ಸರಿಯಾದ ಸಮಯಕ್ಕೆ ನಡೆಯದೇ ಜನರು ಹಾಗೂ ಅಂಗಡಿಕಾರರು ಪರದಾಡುವಂತಾಗಿದೆ. ಕಾಮಗಾರಿ ವಿಳಂಬದಿಂದ ಮತ್ತಷ್ಟು ಸಮಸ್ಯೆ ಎದುರಿಸುವ ಆತಂಕದಲ್ಲಿ ಹುಬ್ಬಳ್ಳಿಯ ಜನರಿದ್ದಾರೆ. ಹಾಗಿದ್ದರೇ ಹುಬ್ಬಳ್ಳಿ ಜನರ ಮಾತನೊಮ್ಮೆ ಕೇಳಿ.
ನಮ್ಮ ಹುಬ್ಬಳ್ಳಿ ಧಾರವಾಡ ಅವಳಿನಗರದ ಜನಪ್ರತಿನಿಧಿಗಳು ವಾರಕ್ಕೊಂದು ಭೂಮಿ ಪೂಜೆ ಮಾಡ್ತಾರೆ. ಆದರೆ ಬಹುತೇಕ ಭೂಮಿ ಪೂಜೆಗಳು ಗುದ್ದಲಿ ಹಾಕಿರುವ ಗುಂಡಿಕೂಡ ಮುಚ್ಚಿ ಹೋಗದಂತ ಸ್ಥಿತಿ ನಿರ್ಮಾಣವಾಗಿದೆ. ಹುಬ್ಬಳ್ಳಿಯ ಕೊಪ್ಪಿಕರ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿದೆ. ಕಳೆದ ಎರಡು ವರ್ಷಗಳಿಂದ ಎದುರು ನೋಡುತ್ತಿದ್ದ ರಸ್ತೆಗೆ ಈಗ ಕಾಮಗಾರಿ ಭಾಗ್ಯ ಬಂದಿದೆ. ಮತ್ತಷ್ಟು ವಿಳಂಬ ಮಾಡಿದರೇ ವ್ಯಾಪಾರ ವಹಿವಾಟು ಇಲ್ಲದೇ ಸಂಕಷ್ಟ ಅನುಭವಿಸಬೇಕಾಗುತ್ತದೆ ಎನ್ನುತ್ತಾರೆ ಇಲ್ಲಿನ ಜನ.
ಒಟ್ಟಿನಲ್ಲಿ ಇದು ಹುಬ್ಬಳ್ಳಿ ಧಾರವಾಡದ ಕಥೆ. ಏನೇ ಯೋಜನೆ ಬಂದರೂ ಕೆಲವು ದಿನ ಹವಾ ಮಾಡುತ್ತೇ ಆ ಮೇಲೆ ತಣ್ಣಗಾಗುತ್ತದೆ. ಆದರೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಜನರ ಧ್ವನಿಯಾಗಿ ಕೆಲಸ ಮಾಡುತ್ತದೆ. ಮತ್ತೊಂದು ಸಾರ್ವಜನಿಕ ಸಮಸ್ಯೆ ಹೊತ್ತು ಪಬ್ಲಿಕ್ ನೆಕ್ಸ್ಟ್ ನಿಮ್ಮ ಬಳಿಗೆ ಬರಲಿದೆ.
ಮಲ್ಲೇಶ ಸೂರಣಗಿ
ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
Kshetra Samachara
12/02/2022 05:18 pm