ಹುಬ್ಬಳ್ಳಿ: ಇದು ರುದ್ರಭೂಮಿಯೋ ಅಥವಾ ಕಾಡೊ ಎಂಬುದು ತಿಳಿಯದಂತಾಗಿದೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಾತ್ರ ರಸ್ತೆಯನ್ನೆ ಮಾಡಲು ಮುಂದಾಗುತ್ತಿದೆ. ಆದ್ರೆ ರುದ್ರಭೂಮಿಯತ್ತ ತಿರುಗಿ ನೋಡುತ್ತಿಲ್ಲವೆಂದು ಜನರು ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಹೀಗೆ ಕಾಡಿನಂತೆ ಕಾಣುತ್ತಿರುವ ಹಾಗೂ ಕುಡುಕರ ಅಡ್ಡೆಯಾಗಿರುವ ದೃಶ್ಯಗಳು ಕಂಡು ಬಂದಿದ್ದು, ಹುಬ್ಬಳ್ಳಿಯ ಬಿಡ್ನಾಳದಲ್ಲಿರುವ ರುದ್ರಭೂಮಿ. ಈ ರುದ್ರಭೂಮಿ ಅವ್ಯವಸ್ಥಿತದಿಂದ ಕೂಡಿದ್ದು ಎಷ್ಟೊ ಸಾರಿ ಪಾಲಿಕೆ ಅಧಿಕಾರಿಗಳಿಗೆ ಇಲ್ಲಿನ ಸಮಸ್ಯೆ ಬಗ್ಗೆ ತಿಳಿಸಿದರು ಯಾರು ಕ್ಯಾರೆ ಎನ್ನುತ್ತಿಲ್ಲ ಎಂದು ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಒಟ್ಟಿನಲ್ಲಿ ಮಹಾನಗರ ಪಾಲಿಕೆ ಮಾತ್ರ ಸ್ಮಾರ್ಟ್ ಸಿಟಿ ಯತ್ತ ಗಮನ ಹರಿಸುತ್ತಿದೆ. ಆದ್ರೆ ಹುಬ್ಬಳ್ಳಿಯಲ್ಲಿ ಸಾಕಷ್ಟು ರುದ್ರಭೂಮಿಗಳು ಅವ್ಯವಸ್ಥೆಯಿಂದ ಕೂಡಿದರು ಇತ್ತ ಗಮನ ಹರಿಸುತ್ತಿಲ್ಲ. ಆದಷ್ಟು ಬೇಗ ಪಾಲಿಕೆ ಅಧಿಕಾರಿಗಳು ಇತ್ತ ಗಮನ ಹರಿಸಿ ಈ ರುದ್ರಭೂಮಿಯನ್ನು ಸ್ವಚ್ಛತೆ ಮಾಡಬೇಕಾಗಿದೆ.
Kshetra Samachara
05/02/2022 03:30 pm