ಧಾರವಾಡ: "ಆರು ತಿಂಗಳ ಹಿಂದಷ್ಟ ಮಾಡಿದ್ದ ರಸ್ತೆ ಈಗ ಕೆಟ್ಟೋಯ್ತು" ಎಂಬ ಶೀರ್ಷಿಕೆಯಡಿ ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದಿಂದ ನಿಗದಿ ಗ್ರಾಮದ ಮೂಲಕ ಹಾದು ಬೆನಕನಕಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಕಳೆದ ನಾಲ್ಕು ದಿನಗಳ ಹಿಂದಷ್ಟೇ ಬಿತ್ತರಿಸಿದ್ದ ಸುದ್ದಿಗೆ ತುರ್ತು ಸ್ಪಂದನೆ ದೊರೆತಿದೆ.
ಶಾಸಕ ಸಿ.ಎಂ.ನಿಂಬಣ್ಣವರ ಕ್ಷೇತ್ರ ವ್ಯಾಪ್ತಿಗೆ ಬರುವ 5.66 ಕಿಲೋ ಮೀಟರ್ ದೂರದ ಈ ರಸ್ತೆಯನ್ನು ಬರೊಬ್ಬರಿ 6 ಕೋಟಿ 46 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಆದರೆ, ಕಾಮಗಾರಿ ನಡೆದ ಆರೇ ತಿಂಗಳಲ್ಲಿ ಈ ರಸ್ತೆ ಅಲ್ಲಲ್ಲಿ ಕಿತ್ತು ಅಧಿಕಾರಿಗಳ ಹಾಗೂ ಶಾಸಕರ ಕಾರ್ಯಕ್ಕೆ ಹಿಡಿದ ಕೈಗನ್ನಡಿಯಂತೆ ಕಾಣುತ್ತಿತ್ತು. ಇದರ ಮೇಲೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಬೆಳಕು ಚೆಲ್ಲಿ ವರದಿ ಪ್ರಸಾರ ಮಾಡಿತ್ತು. ವರದಿಯಿಂದ ಎಚ್ಚೆತ್ತ ಶಾಸಕರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಇದೀಗ ಆ ರಸ್ತೆ ರಿಪೇರಿ ಮಾಡಿಸಿದ್ದಾರೆ.
5.66 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ರಸ್ತೆ ಕೆಟ್ಟು ಹೋಗಿದೆಯೋ ಆ ರಸ್ತೆಯನ್ನು ಇದೀಗ ಮತ್ತೆ ಸುಧಾರಣೆ ಮಾಡಲಾಗಿದೆ. 6 ಕೋಟಿ 46 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ರಸ್ತೆ ಸುಸಜ್ಜಿತವಾಗಿ ನಿರ್ಮಾಣವಾಗಬೇಕಿತ್ತು. ಆದರೆ, ಕಾಮಗಾರಿ ಕಳಪೆಯಾಗಿದ್ದರಿಂದ ರಸ್ತೆ ಕಿತ್ತು ಹೋಗಿತ್ತು. ಪಬ್ಲಿಕ್ ನೆಕ್ಸ್ಟ್ ಈ ರಸ್ತೆಯ ಮೇಲೆ ಬೆಳಕು ಚೆಲ್ಲಿದ ನಂತರ ಮತ್ತೆ ರಸ್ತೆಗೆ ಸುಧಾರಣೆ ಭಾಗ್ಯ ಬಂದಿದೆ.
Kshetra Samachara
25/01/2022 05:44 pm