ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 2021ರ ಸಿಹಿ-ಕಹಿಗಳ ಹಿನ್ನೋಟ: ಕಣ್ಣು ಬಿಡುವುದರಲ್ಲಿಯೇ 2022ರ ಚಿತ್ರಪಟ...!

ಹುಬ್ಬಳ್ಳಿ: 2020ರ ಮಗ್ಗಲನ್ನು ಬದಲಿಸಿ ಮೇಲೆ ಏಳಬೇಕು ಎನ್ನುವಷ್ಟರಲ್ಲಿಯೇ ಕೋವಿಡ್–19 ಎರಡನೇ ಅಲೆಯ ಆತಂಕದೊಂದಿಗೆ 2021 ಆರಂಭವಾಯಿತು. ಕೋವಿಡ್ ಲಸಿಕೆಯ ಅಭಿಯಾನದ ಜೊತೆಗೆ, ಲಾಕ್‌ಡೌನ್ ಸಡಿಲಗೊಂಡು ಜನಜೀವನ ಸಾಮಾನ್ಯ ಸ್ಥಿತಿಗೆ ಮರಳಿತು. ಇನ್ನೇನು ಎಲ್ಲವೂ ಸರಿ ಹೋಯಿತು ಎನ್ನುವಷ್ಟರಲ್ಲಿ ವರ್ಷಾಂತ್ಯದ ಹೊತ್ತಿಗೆ ರೂಪಾಂತರಿ ಓಮೈಕ್ರಾನ್ ವಕ್ಕರಿಸಿದೆ. ಒಂದು ನೋವನ್ನು ಮರೆತು ಹೊಸ ವರ್ಷಾಚರಣೆಯ ಮಾಡಬೇಕು ಎನ್ನುವಷ್ಟರಲ್ಲಿಯೇ ಮತ್ತೊಂದು ಆತಂಕ ಎದುರಾಗಿದ್ದು, 2021ರ ಕೆಲವೊಂದು ನೆನಪು ಮಾತ್ರ ಮತ್ತೇ ಮತ್ತೇ ನೆನಪು ಆಗುತ್ತಲೇ ಇರುತ್ತದೆ.

2021ರ ಎಳು ಬೀಳಿನ ನಡುವೆ ಹಲವಾರು ಘಟನೆಗಳು ಸಂಭವಿಸಿವೆ. ವಾಣಿಜ್ಯನಗರಿ ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಜನವರಿಯಲ್ಲಿ ವರ್ಚುವಲ್‌ ಆಗಿ ಚಾಲನೆ ನೀಡಲಾಗಿದೆ. ಬಿಆರ್‌ಟಿಎಸ್‌ಗೆ ಸ್ಕೊಚ್‌ ಸಂಸ್ಥೆಯ ರಾಷ್ಟ್ರೀಯ ಮಟ್ಟದ ಸ್ವರ್ಣ ಪ್ರಶಸ್ತಿ, ಚನ್ನಮ್ಮ ವೃತ್ತದಲ್ಲಿ ಹಳೇ ಬಸ್ ನಿಲ್ದಾಣ ಕೆಡವಿ ಹೊಸ ನಿಲ್ದಾಣಕ್ಕೆ ಚಾಲನೆ ನೀಡಲಾಗಿದೆ. ಇನ್ನೂ ನಗರದ ವಿಮಾನ ನಿಲ್ದಾಣದಲ್ಲಿ ಕಾರ್ಗೊ ಸೇವೆ ಆರಂಭವಾಗಿದೆ.

ಇನ್ನೂ ಸಾಕಷ್ಟು ಸಾರ್ವಜನಿಕರ ಸಮಸ್ಯೆಗಳಿದ್ದರೂ ನಮ್ಮ ಜನ ಕ್ಯಾಲೆಂಡರ್ ಬದಲಾವಣೆ ಮಾಡುತ್ತಿದ್ದಾರೆ ವಿನಃ ಬದಲಾಗದ ವ್ಯವಸ್ಥೆಯಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಸ್ಮಾರ್ಟ್ ಆಗದಿದ್ದರೂ ಸ್ಮಾರ್ಟ್ ಸಿಟಿ ಯೋಜನೆಯ ಕಲ್ಪನೆಯಲ್ಲಿಯೇ 2021ನ್ನು ತಳ್ಳಿಕೊಂಡು ಬರಲಾಯಿತು.

ಇನ್ನೂ ವಿಶೇಷ ಅಂದರೆ ನಗರದ ರೈಲು ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣ ಎಂದು ನಾಮಕರಣ, ಪಾಲಿಕೆಯಲ್ಲಿ ಹೊಸ ಪರ್ವ ಉಂಟಾಗಿದ್ದು, ಎರಡೂವರೆ ವರ್ಷಗಳ ನಂತರ ಮಹಾನಗರ ಪಾಲಿಕೆಗೆ ಸೆಪ್ಟೆಂಬರ್‌ನಲ್ಲಿ ಚುನಾವಣೆ ನಡೆಯಿತು. ಮರು ವಿಂಗಡಣೆಯಾದ 82 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 39, ಕಾಂಗ್ರೆಸ್ 33, ಜೆಡಿಎಸ್ 1, ಎಐಎಂಐಎಂ 3 ಸ್ಥಾನ ಪಡೆದರೆ, ಪಕ್ಷೇತರರು 6 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದರು.

ಅವಳಿನಗರ ಸ್ವಚ್ಛವಾಗದಿದ್ದರೂ ಮಹಾನಗರ ಪಾಲಿಕೆಯು ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣ ಯೋಜನೆಯ ಎರಡು ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ಇದು ಮಾತ್ರವಲ್ಲದೆ ಕೆಲವೊಂದು ಕ್ರೈಮ್ ಪ್ರಕರಣ ವರ್ಷ ಬದಲಾದರೂ ನೆನಪು ಬದಲಾಗದಂತೆ ಉಳಿದುಕೊಂಡಿವೆ.ವಹೆಬಸೂರಿನ ಮಲಪ್ರಭಾ ಕಾಲುವೆ ಬಳಿ ಜನವರಿಯಲ್ಲಿ ಫೋಟೊಶೂಟ್ ಮಾಡುತ್ತಿದ್ದ ಐವರ ಮೇಲೆ ಹೆಜ್ಜೇನುಗಳು ದಾಳಿ ನಡೆಸಿದ್ದರಿಂದ, ತಪ್ಪಿಸಿಕೊಳ್ಳುವ ಭರದಲ್ಲಿ ನೀರಿಗೆ ಬಿದ್ದು ಮೂವರ ಸಾವು, ರಾಕೇಶ ಕಾಟವೆ ಎಂಬ ಯುವಕನನ್ನು ಕೊಲೆ ಮಾಡಿ ರುಂಡ– ಮುಂಡವನ್ನು ಬೇರೆ, ಬೇರೆ ಕಡೆ ಎಸೆದಿದ್ದ ಪ್ರಕರಣದಲ್ಲಿ, ಯುವಕನ ಪ್ರೇಯಸಿ ಸೇರಿದಂತೆ ನಾಲ್ವರ ಬಂಧನ, ಮತಾಂತರಕ್ಕೆ ಯತ್ನ ಆರೋಪ ಖಂಡಿಸಿ ನವನಗರ ಪೊಲೀಸ್ ಠಾಣೆಗೆ ಹಿಂದೂಪರ ಸಂಘಟನೆಗಳಿಂದ ಮುತ್ತಿಗೆ. ಪ್ರತಿಯಾಗಿ ಕ್ರೈಸ್ತರಿಂದ ಪ್ರತಿಭಟನೆ. ಡಿಸಿಪಿ ನಿಂದಿಸಿದ್ದಕ್ಕಾಗಿ 100 ಮಂದಿ ವಿರುದ್ಧ ಪ್ರಕರಣ ದಾಖಲು. ಘಟನೆ ಬಳಿಕ ಡಿಸಿಪಿ ರಾಮರಾಜನ್ ವರ್ಗಾವಣೆ.

ಇನ್ನೂ 2021ರಲ್ಲಿ ಶೈಕ್ಷಣಿಕ ವರ್ಷದಲ್ಲಿ ಸಾಕಷ್ಟು ತೊಡಕುಗಳು ಎದುರಾಗಿವೆ. ಪರೀಕ್ಷೆ ವಿರೋಧಿಸಿ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಒಂದು ವಾರ ಪ್ರತಿಭಟನೆ. ಅಂತಿಮವಾಗಿ ಪರೀಕ್ಷಾ ವೇಳಾಪಟ್ಟಿ ಅನೂರ್ಜಿತಗೊಳಿಸಿದ ಹೈಕೋರ್ಟ್‌, ಆಂತರಿಕ ಮೌಲ್ಯಮಾಪನ ಮಾಡಿ ವಿದ್ಯಾರ್ಥಿಗಳಿಗೆ ಮುಂದಿನ ತರಗತಿಗಳಿಗೆ ಬಡ್ತಿ ನೀಡಲು ಆದೇಶ ಮಾಡಲಾಯಿತು.

ಇನ್ನೂ ಉತ್ತರ ಕರ್ನಾಟಕಕ್ಕೆ 2021 ಹೊಸ ಅಧ್ಯಾಯದ ಪರ್ವವಾಗಿತ್ತು. ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದು, ಬಸವರಾಜ ಹೊರಟ್ಟಿ ಸಭಾಪತಿಯಾಗಿದ್ದು, ಬಿಎಸ್‌ವೈ ಸಂಪುಟದಲ್ಲಿ ಸಚಿವರಾಗಿದ್ದ ಇಲ್ಲಿನ ಶಾಸಕ ಜಗದೀಶ ಶೆಟ್ಟರ್, ಬೊಮ್ಮಾಯಿ ಸಂಪುಟ ಸೇರದೆ ದೂರ ಉಳಿದಿದ್ದಾರೆ. ಹಾನಗಲ್ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಹುಬ್ಬಳ್ಳಿಯ ಶ್ರೀನಿವಾಸ ಮಾನೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆದ್ದರು. ಬಿಜೆಪಿ ರಾಜ್ಯ ಕಾರ್ಯಕಾರಿಣಿಯು ಡಿಸೆಂಬರ್ ಅಂತ್ಯದಲ್ಲಿ ಎರಡು ದಿನ ನಡೆಯಿತು.

ಇನ್ನೂ ವೈದ್ಯಕೀಯ ಕ್ಷೇತ್ರದಲ್ಲಿ ಕೋವಿಡ್ ಎರಡನೇ ಅಲೆ ಉತ್ತುಂಗದಲ್ಲಿದ್ದಾಗ ಧಾರವಾಡ ಜಿಲ್ಲೆಯಷ್ಟೇ ಅಲ್ಲದೆ, ಉತ್ತರ ಕರ್ನಾಟಕ ಭಾಗದ ಕೆಲ ಜಿಲ್ಲೆಗಳಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಸಂಜೀವಿನಿಯಾಯಿತು. ವೆಂಟಿಲೇಟರ್ ಸಹಿತ ಹಾಸಿಗೆಗಳು, ಒಂದೂವರೆ ಸಾವಿರಕ್ಕೂ ಹೆಚ್ಚು ಕೋವಿಡ್ ಬೆಡ್‌ಗಳು, 100 ಹಾಸಿಗೆ ಸಾಮರ್ಥ್ಯದ ತಾತ್ಕಾಲಿಕ ಆರೈಕೆ ಕೇಂದ್ರ, ಮಕ್ಕಳ ಕೋವಿಡ್ ಆರೈಕೆ ಕೇಂದ್ರ, ಕಪ್ಪು ಶಿಲೀಂಧ್ರಕ್ಕೆ ಚಿಕಿತ್ಸೆ ಹಾಗೂ ದಾಖಲೆ ಪ್ರಮಾಣದಲ್ಲಿ ಕೋವಿಡ್ ಲಸಿಕೆ ಅಭಿಯಾನದ ಮೈಲುಗಲ್ಲುಗಳಿಗೆ ಕಿಮ್ಸ್ ಸಾಕ್ಷಿಯಾಯಿತು.

Edited By : Shivu K
Kshetra Samachara

Kshetra Samachara

01/01/2022 01:08 pm

Cinque Terre

60.2 K

Cinque Terre

0

ಸಂಬಂಧಿತ ಸುದ್ದಿ