ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರದ ನಡುವೆ ತ್ವರಿತ ಸಾರಿಗೆ ಸೇವೆಯನ್ನು ಕಲ್ಪಿಸುತ್ತಿರುವ ಚಿಗರಿ ಸೇವೆಯನ್ನು ಬಿ.ಆರ್.ಟಿ.ಎಸ್ ವ್ಯವಸ್ಥಾಪಕರ ಹಾಗೂ ಪೊಲೀಸ್ ಆಯುಕ್ತರ ನಿರ್ದೇಶನದ ಮೇರೆಗೆ ಇಂದು ರಾತ್ರಿ ಸಾರಿಗೆ ಸೇವೆಯನ್ನು ರಾತ್ರಿ 11 ಗಂಟೆಯನ್ನು ಪರಿಷ್ಕರಣೆಗೊಳಿಸಿ 10 ಗಂಟೆ ವರೆಗೆ ನಿಗದಿಪಡಿಸಲಾಗಿದೆ.
ಹೌದು.. ಹೊಸ ವರ್ಷಾಚರಣೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಿದ್ದು,ಅಲ್ಲದೇ ನೈಟ್ ಕರ್ಫ್ಯೂ ಜಾರಿಯಲ್ಲಿರುವ ಹಿನ್ನಲೆಯಲ್ಲಿ ಯಾರೂ ಕೂಡ ನಿಯಮ ಉಲ್ಲಂಘನೆ ಮಾಡಬಾರದು ಎಂಬುವಂತ ಹಿನ್ನಲೆಯಲ್ಲಿ ಚಿಗರಿ ಸೇವೆಯನ್ನು 10 ಗಂಟೆಗೆ ಸ್ಥಗಿತಗೊಳಿಸಲಾಗುವುದು.
Kshetra Samachara
31/12/2021 01:18 pm