ವರದಿ: ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ.
ನವಲಗುಂದ : ಈ ಹಿಂದೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಈ ರಸ್ತೆಯ ದುಸ್ಥಿತಿಯ ಬಗ್ಗೆ ಸುದ್ದಿಯನ್ನು ಬಿತ್ತರಿಸಿತ್ತು. ಇದಕ್ಕೆ ಎಚ್ಚೆತ್ತ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಈಗ ರಸ್ತೆಗೆ ತ್ಯಾಪೆ ಹಚ್ಚುವ ಕೆಲಸ ಮಾಡಿದ್ದು, ಸಾರ್ವಜನಿಕರಿಗೆ ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ.
ಎಸ್ ನವಲಗುಂದದಿಂದ ಅಣ್ಣಿಗೇರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದು, ಈ ರಸ್ತೆಯ ದುಸ್ತಿತಿಯಿಂದ ಅದೆಷ್ಟೋ ಜನರು ಉಸಿರು ಚೆಲ್ಲಿದ ಉದಾಹರಣೆಗಳು ಇಲ್ಲಿ ನಡೆದಿವೆಯಂತೆ, ಈ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಸಹ ಸುದ್ದಿಯನ್ನು ಪ್ರಕಟಿಸಿತ್ತು. ಇದಕ್ಕೆ ಫಲಶ್ರುತಿ ಎಂಬಂತೆ ರಸ್ತೆಗೆ ಈಗ ಡಾಂಬರಿಕರಣವಾಗಿದೆ. ಆದರೆ ಇದು ಕೂಡ ಬಹಳ ದಿನ ಬಾಳಿಕೆ ಬರುವಂತೆ ಕಾಣುತ್ತಿಲ್ಲ ಎಂಬುದು ಜನರ ಮಾತಾಗಿದೆ. ಇನ್ನು ಈ ರಸ್ತೆಗೆ ಶಾಶ್ವತ ಪರಿಹಾರ ಯಾವಾಗ ಸಿಗುತ್ತೊ ಅಂತಾ ಸಾರ್ವಜನಿಕರು ಎದುರು ನೋಡುವಂತಾಗಿದೆ.
Kshetra Samachara
23/12/2021 01:52 pm