ಹುಬ್ಬಳ್ಳಿ: ನೀವು ಈ ರಸ್ತೆಯಲ್ಲಿ ಹೋಗಬೇಕಾ ? ಹಾಗಿದ್ರೆ ಮೂಗು ಮುಚ್ಚಿಕೊಂಡು ಹೋಗಿ. ಈ ರಸ್ತೆಯಲ್ಲಿ ಹೋಗುವ ಜನರು ದುರ್ವಾಸನೆಯಿಂದ ಬೇಸತ್ತು ಹೋಗಿದ್ದಾರೆ. ಸ್ವಚ್ಛತೆ ಸ್ವಚ್ಛತೆ ಎನ್ನುವ ನಮ್ಮ ಪಾಲಿಕೆಗೆ ಈ ಜಾಗ ಮಾತ್ರ ಕಾಣುತ್ತಿಲ್ಲವೇ ?
ಹೌದು. ಹೀಗೆ ರಸ್ತೆಯ ಮಧ್ಯದಲ್ಲಿ ಕಸ, ಸತ್ತ ಶ್ವಾನವನ್ನು ಹಾಕಿರುವ ದೃಶ್ಯಗಳು ಕಂಡು ಬಂದದ್ದು ನಗರದ ವಾಸನಾಯ್ಕರ ಆಸ್ಪತ್ರೆಯ ಪಕ್ಕದ ವಿವೇಕಾನಂದ ಆಸ್ಪತ್ರೆಗೆ ಹೋಗುವ ರಸ್ತೆಯಲ್ಲಿ. ಇಲ್ಲಿ ಕಸದ ರಾಶಿ ತುಂಬಿ ತುಳುಕುತ್ತಿದ್ದು, ಈ ಸ್ಥಳದಲ್ಲಿ ಹೋಗಬೇಕಾದರೆ ಜನರಿಗೆ ತುಂಬಾ ಕಷ್ಟವಾಗುತ್ತಿದೆ. ಈ ಕಸವನ್ನು ಪಾಲಿಕೆಯ ಸ್ವಚ್ಛತಾ ಸಿಬ್ಬಂದಿ ಸ್ವಚ್ಛ ಮಾಡುತ್ತಾರೋ ಇಲ್ಲವೋ ಎಂಬ ಅನುಮಾನ ಮೂಡುತ್ತಿದೆ.
ನಮ್ಮ ಪಾಲಿಕೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಮ್ಮ ಹುಬ್ಬಳ್ಳಿ ಸ್ಮಾರ್ಟ್ ಸಿಟಿ ಅಂತ ಕೇವಲ ಹೆಸರಿಗೆ ಮಾತ್ರವೇ ಹೇಳುತ್ತಿದ್ದು, ಸ್ಮಾರ್ಟ್ ಅನ್ನೋದು ಯಾವುದು ಇಲ್ಲ ಎನ್ನುವುದಕ್ಕೆ ಇದೊಂದು ಉದಾಹರಣೆಯಾಗಿದೆ.
Kshetra Samachara
22/12/2021 01:34 pm