ವರದಿ: ಈರಣ್ಣ ವಾಲಿಕಾರ
ಹುಬ್ಬಳ್ಳಿ: ಹಾಳು ಕೊಂಪೆಯಾಗಿದ್ದ ಜಾಗ ಇದೀಗ ಅತ್ಯಾಧುನಿಕ ಸ್ಪರ್ಶದೊಂದಿಗೆ ಸಿದ್ಧಗೊಂಡಿದ್ದು ಜನವರಿ ತಿಂಗಳಲ್ಲಿ ಉದ್ಘಾಟನೆಗೆ ಸಿದ್ಧಗೊಂಡಿದೆ. ಅಷ್ಟಕ್ಕೂ ಅದು ಯಾವುದು ಅಂತಿರಾ ಈ ಸ್ಟೋರಿ ನೋಡಿ.
ಸುಂದರವಾದ ಕಟ್ಟಡ, ವಿಭಿನ್ನವಾಗಿ ತಯಾರಾದ ವೇದಿಕೆಗಳು, ಇಷ್ಟೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೇಶ್ವಾಪೂರ ಶಾಂತಿ ನಗರದಲ್ಲಿ. ಸುಮಾರು 3 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಕೇಶ್ವಾಪುರ ಬೆಂಗೇರಿ ಮಾರುಕಟ್ಟೆ, ವಾರದ ಒಂದು ದಿನ ಅಂದರೆ, ಪ್ರತಿ ಶನಿವಾರ ವಾರದ ಸಂತೆ ನಡೆಯಲಿದ್ದು, ಸಂಜೆ ಚಾಟ್ ಸೆಂಟರ್, ಇನ್ನುಳಿದ ದಿನಗಳಲ್ಲಿ ಸಭೆ-ಸಮಾರಂಭ ಗಳಿಗೂ ಇದು ವೇದಿಕೆಯಾಗಲಿದೆ.
ಈ ಹಿಂದೆ ಪ್ರತಿ ಶನಿವಾರಕ್ಕೊಮ್ಮೆ ಕೇಶ್ವಾಪುರದಲ್ಲಿನ ರಸ್ತೆಯಲ್ಲಿಯೇ ಸಂತೆ ನಡೆಯುತ್ತಿದ್ದು ಸಂಚಾರಕ್ಕೆ ಅಸ್ತವ್ಯಸ್ತವಾಗಿತ್ತು. ಸುಸಜ್ಜಿತ ರೀತಿಯಲ್ಲಿ ಸಂತೆ ನಡೆಸಲು ಬೆಂಗೇರಿಯಲ್ಲಿನ ಖಾಲಿ ಜಾಗಕ್ಕೆ ಸಂತೆಯನ್ನು ಸ್ಥಳಾಂತರಿಸಲಾಗಿತ್ತು. ಜಾಗ ಇದೆ ಎಂಬುದು ಬಿಟ್ಟರೆ ಬೇರೇನು ಸೌಲಭ್ಯ ಇಲ್ಲಿ ಇರಲಿಲ್ಲ. ಸ್ಮಾರ್ಟ್ ಸಿಟಿ ಯೋಜನೆಯಡಿ ಸಂತೆ ಜಾಗ ಅಭಿವೃದ್ಧಿಪಡಿಸುವ ಕಾಮಗಾರಿ ಈಗ ಕೈಗೊಳ್ಳಲಾಗಿದ್ದುಇದೀಗ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿದೆ.
ಸಂತೆಗಾಗಿ ಮೀಸಲಿಟ್ಟ ಜಾಗದಲ್ಲಿ ಶನಿವಾರ ಸಂತೆ ನಡೆದರೆ,ಉಳಿದ ದಿನಗಳಲ್ಲಿಯೂ ಜಾಗದ ಸದ್ಬಳಕೆ ನಿಟ್ಟಿನಲ್ಲಿ ಬೆಳಗಿನ ವೇಳೆ ಯೋಗ, ಧ್ಯಾನ, ಸಂಜೆಯಾಗುತ್ತಿದ್ದಂತೆ ರಸ್ತೆ ಬದಿ ತಿಂಡಿ-ತಿನಿಸುಗಳ ಅಂಗಡಿ, ಚಾಟ್ ಸೆಂಟರ್, ಸಂಗೀತ ಕಾರ್ಯಕ್ರಮ ಸಭೆ-ಸಮಾರಂಭಗಳು, ಫಲಪುಷ್ಪ ಪ್ರದರ್ಶನ ಸೇರಿದಂತೆ ಬಹುಪಯೋಗಕ್ಕೆ ಪೂರಕವಾಗಿದೆ.
Kshetra Samachara
21/12/2021 03:51 pm