ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿರ್ವಹಣೆ ಉನ್ನತ ಶಿಕ್ಷಣ ಇಲಾಖೆ ಹೊಣೆ

ಕುಂದಗೋಳ : ಪಟ್ಟಣದ ಗ್ರಾಮೀಣ ಭಾಗದ ವಿಧ್ಯಾ ಕಾಶಿ ಎಂದೇ ಖ್ಯಾತಿಯಾಗಿ ಅದೆಷ್ಟೋ ಬಡ ಮಧ್ಯಮ ವರ್ಗದ ಮಕ್ಕಳಿಗೆ ಉತ್ತಮ ಭವಿಷ್ಯದ ಭದ್ರ ಬುನಾದಿ ಹಾಕಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಿರ್ವಹಣೆ ಕೊರತೆಯಿಂದ ಬಳಲುತ್ತಿದೆ.

ಹೌದು ! ಸ್ವಾಮಿ ಕುಂದಗೋಳ ತಾಲೂಕಿನ 57 ಹಳ್ಳಿಗರ ರೈತರ ಮಕ್ಕಳಿಗೆ ವರವಾಗಿ 2014 ರಲ್ಲಿ ಕುಂದಗೋಳದಲ್ಲಿ ಸ್ದಾಪನೆಯಾದ ಕಾಲೇಜು ಇದೀಗ ತನ್ನನ್ನು ತಾನು ನಿರ್ವಹಣೆ ಮಾಡಿಕೊಳ್ಳದ ಸ್ಥಿತಿಗೆ ತಲುಪಿದೆ, ಈ ಕಾರಣ ಕಾಲೇಜು ಸುತ್ತ ಕಸ, ಕಡ್ಡಿ, ಹುಲ್ಲು ಬೆಳೆದಿದ್ದರೇ, ಕಾಲೇಜು ಗೋಡೆ ಸೀಳು ಬಿಟ್ಟಿವೆ, ಇನ್ನೂ ಮುಖ್ಯವಾಗಿ ಕಾಲೇಜು ಕೊಠಡಿ ಕಿಟಕಿ ಗ್ಲಾಸು ಒಡೆದು ಹಾಳಾದ್ರೇ, ನೆಲಹಾಸು ಕಲ್ಲುಗಳು ಒಡೆಯುವ ಅಂಚಿನಲ್ಲಿವೆ, ಮುಖ್ಯವಾಗಿ ಕಾಲೇಜಿನ ವಿದ್ಯುತ್ ಸಂಪರ್ಕದ ವಯರ್ ಬಟನ್ ಹಾಳಾಗಿ ಅಪಾಯದ ಮುನ್ಸೂಚನೆ ನೀಡಿವೆ.

ಈ ಎಲ್ಲ ಪರಿಸ್ಥಿತಿ ಅರಿತು ಕಾಲೇಜು ಪ್ರಭಾರಿ ಪ್ರಾಂಶುಪಾಲ ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆದು ಕಾಲೇಜಿಗೆ ನಿರ್ವಹಣೆ ವೆಚ್ಚ ನಿಡುವಂತೆ ಮನವಿ ಮಾಡಿದ್ದಾರೆ. ಆದ್ರೇ 2014 ರಿಂದ 2021 ರವರೆಗೆ ಕಾಲೇಜು ಅಭಿವೃದ್ಧಿಗೆ ಉನ್ನತ ಶಿಕ್ಷಣ ಇಲಾಖೆ ಮುಂದಾಗಿಲ್ಲ.

ಈಗಾಗಲೇ ಕಾಲೇಜಿನಲ್ಲಿ ಬಿಎ. ಬಿಕಾಮ್ ಸೇರಿ 528 ಜನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅತಿಥಿ ಉಪನ್ಯಾಸಕರ 8 ಹುದ್ದೆಗೆ ಖಾಯಂ ಶಿಕ್ಷಕರು ಅವಶ್ಯಕತೆ ಇದೆ‌. ಈ ಬಗ್ಗೆ ಸಂಬಂಧಪಟ್ಟ ಉನ್ನತ ಶಿಕ್ಷಣ ಇಲಾಖೆ ಗಮನಿಸಕಿದೆ‌.

ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್

Edited By : Shivu K
Kshetra Samachara

Kshetra Samachara

14/12/2021 06:25 pm

Cinque Terre

51.05 K

Cinque Terre

0

ಸಂಬಂಧಿತ ಸುದ್ದಿ