ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಲೆಕ್ಕಕ್ಕುಂಟು ಬೆಳಕಿಗಿಲ್ಲಾ ಎಂಬಂತಾದ ಹೈ ಮಾಸ್ಟ್ ದೀಪಗಳು ಜನರಿಗೆ ತೊಂದರೆ

ಕುಂದಗೋಳ : ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕರು ಹಾಗೂ ಸ್ಥಳೀಯರು ಅನುಕೂಲದ ಬೆಳಕಿನ ಸೌಲಭ್ಯಕ್ಕಾಗಿ ನಿರ್ಮಿಸಿದ 7 ಹೈ ಮಾಸ್ಟ್ ವಿದ್ಯುತ್ ದೀಪಗಳು ಸ್ಥಗಿತಗೊಂಡಿವೆ.

ಕುಂದಗೋಳ ಪಟ್ಟಣ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರೋಬ್ಬರಿ 11 ಹೈ ಮಾಸ್ಟ್ ದೀಪಗಳಿದ್ದು, ಅದರಲ್ಲಿ ಗಾಳಿ ಮರೆಮ್ಮದೇವಿ ದೇವಸ್ಥಾನ, ಅಗಸಿಹೊಂಡ, ಬಿಡನಾಳ ಪ್ಲಾಟ್, ಕುಂಬಾರ ಓಣಿ, ಅಂಬೇಡ್ಕರ್ ಆಶ್ರಯ ಪ್ಲಾಟ್, ಮಸಾರಿ ಪ್ಲಾಟ್, ಲಾಲಸಾಬ್ ಮಸೂತಿ ಓಣಿಯ ಪ್ರಮುಖ ಸ್ಥಳಗಳಲ್ಲಿ ಅಳವಡಿಸಲಾದ 6 ಹೈ ಮಾಸ್ಟ್ ದೀಪಗಳು ತಾಂತ್ರಿಕ ದೋಷದ ಕಾರಣ ಹಲವಾರು ದಿನಗಳಿಂದ ಸ್ಥಗಿತಗೊಂಡಿವೆ.

ಇದರಿಂದ ಸ್ಥಳೀಯರಿಗೆ ಸಂಚಾರದ ತೊಂದರೆ ಜೊತೆ ಅಗಸಿಹೊಂಡದ ಬಳಿಯ ನಿವಾಸಿಗಳಿಗೆ ಪಕ್ಕದಲ್ಲೇ ಹೊಂಡವಿದ್ದು, ಮಕ್ಕಳನ್ನು ರಾತ್ರಿ ಹೊರಗಡೆ ಕಳುಹಿಸಲು ಭಯ ಉಂಟಾಗಿದೆ, ಈ ಬಗ್ಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕ್ರಮ ಕೈಗೊಂಡು ಹೈ ಮಾಸ್ಟ್ ದೀಪ ದುರಸ್ತಿ ಮಾಡುವಂತೆ ಸಾರ್ವಜನಿಕರು ಪಬ್ಲಿಕ್ ನೆಕ್ಸ್ಟ್ ಮೂಲಕ ಒತ್ತಾಯಿಸಿದ್ದಾರೆ.

Edited By : Shivu K
Kshetra Samachara

Kshetra Samachara

03/12/2021 05:35 pm

Cinque Terre

54.15 K

Cinque Terre

3

ಸಂಬಂಧಿತ ಸುದ್ದಿ