ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಒಂದ ಸಲಾ ಮೂಕಾಂಬಿಕಾ ನಗರದಾಗ ಹಾದ ಬರ್ರಿ ನೋಡುಣ

ಧಾರವಾಡ: ಹಾ ನಮಸ್ಕಾರ್ರೀ ಧಾರವಾಡ ಮಂದಿಗೆ.. ನಮ್ಮ ಧಾರವಾಡ ಸ್ಮಾರ್ಟ್ ಸಿಟಿ ಅಕ್ಕತಿ ಅಂತಾ ನಮ್ಮ ಜನಪ್ರತಿನಿಧಿಗಳು ಬೊಬ್ಬೆ ಹೊಡ್ಯಾಕತ್ತಾರ. ಅವರ ಮಾತ ಕೇಳಕೊಂತ ನಾವೂ ಗಡದ್ದಾಗಿ ಗೊರಕಿ ಹೊಡ್ಯಾಕತ್ತೇವಿ.

ನೋಡ್ರಿ ಇಲ್ಲೆ.. ಇದು ಧಾರವಾಡದ ಮೂಕಾಂಬಿಕಾ ನಗರದ ಒಳರಸ್ತೆ ಪರಿಸ್ಥಿತಿ. ಇದ ಒಂದ ಅಲ್ಲ ಎಲ್ಲಾ ರಸ್ತೆಗಳದ್ದೂ ಇದ ಪರಿಸ್ಥಿತಿ. ಮೂಕಾಂಬಿಕಾ ನಗರದಾಗ ರಸ್ತೆ ತುಂಬ ತಗ್ಗು ಬಿದ್ದು ಮಂದಿ ಬಾಳ ತ್ರಾಸ್ ಪಡುವಂಗ ಆಗೇತಿ. ಇಷ್ಟ ದಿನಾ ಕಾರ್ಪೋರೇಶನ್ನ್ಯಾಗ ಸದಸ್ಯರ ಇಲ್ಲಾ ಅಂತಿದ್ರ ಈಗ ಸದಸ್ಯರೂ ಬಂದಾರ. ಆದ್ರ ಏನ್ ಮಾಡೋದ್ರಿ ಚುನಾವಣಾ ನೀತಿ ಸಂಹಿತೆ ಜಾರಿಯೋಳಗ ಐತಿ ಕೆಲಸಾ ಮಾಡಾಕ ಬರೋದಿಲ್ಲ ಅನ್ನಾಕತ್ತಾರ.

ಹಿಂಗ್ ಒಂದಿಲ್ಲಾ ಒಂದ್ ನೆವಾ ಹೇಳಕೊಂತ ಮಂದಿ ಕಣ್ಣಾಗ ಮಣ್ಣ ಒಗಿಯೋ ಕೆಲಸಾ ನಡ್ಯಾಕತ್ತೈತಿ. ಇರ್ಲಿ ಚುನಾವಣಾ ನೀತಿ ಸಂಹಿತೆ ಮುಗದ ಮ್ಯಾಲರ ಈ ರಸ್ತೆ ಸುದ್ದ ಮಾಡಿ ಕೊಡ್ರಿ ಪಾ ಒಟ್ಟ.

-ಇದು ವೀಕ್ಷಕ ವರದಿ

Edited By : Manjunath H D
Kshetra Samachara

Kshetra Samachara

19/11/2021 09:58 am

Cinque Terre

100.98 K

Cinque Terre

6

ಸಂಬಂಧಿತ ಸುದ್ದಿ