ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ದಿನಬೆಳಿಗ್ಗೆ ತುಂಬಿದ ಚರಂಡಿಯ ದರ್ಶನ ಪಡೆಯುವ ಅನಿವಾರ್ಯತೆಯಲ್ಲಿ ಸ್ಥಳೀಯರು

ವರದಿ: ವಿನೋದ ಇಚ್ಚಂಗಿ,ಪಬ್ಲಿಕ್ ನೆಕ್ಸ್ಟ್ ನವಲಗುಂದ

ನವಲಗುಂದ: ಸಮಸ್ಯೆಗೆ ಕೊನೆಯೇ ಇಲ್ಲ ಎಂಬುದು ಎಲ್ಲರಿಗೂ ತಿಳಿದಿರೋ ವಿಷಯಾನೆ, ಕೆಲವೊಂದು ಸಮಸ್ಯೆಗಳು ಕಾಣುವ ಹಾಗೆ ಇರ್ತವೆ, ಇನ್ನು ಕೆಲವು ಕಾಣದ ಹಾಗೆ ಇದ್ರೂ ಅದರಿಂದ ಸಾಕಷ್ಟು ತೊಂದರೆ ಅನುಭವಿಸುವಂತೆ ಆಗಿರ್ತವೆ, ಈಗ ಇಲ್ಲಿ ಆಗಿರೋದು ಇದೆ ನೋಡಿ, ಹೇಳೋರು ಕೇಳೋರು ಇಲ್ಲದಂತೆ ಇರುವ ಪ್ಲಾಟ್ ನಲ್ಲಿ ಎತ್ತ ನೋಡಿದರು ಸಮಸ್ಯೆಗಳೇ...

ಬಹು ಮುಖ್ಯವಾಗಿ ಇಲ್ಲಿ ಇರುವ ಸಮಸ್ಯೆ ಅಂದ್ರೆ ರಸ್ತೆ ಮತ್ತು ಚರಂಡಿ ಸಮಸ್ಯೆ. ಇದು ನವಲಗುಂದ ಪಟ್ಟಣದ ಧಾರವಾಡದವರ ಪ್ಲಾಟ. ಉದಾಹರಣೆಗಾಗಿ ಇಲ್ಲಿನ ಕನಕ ಭವನದ ಈ ಒಂದು ರಸ್ತೆ ಮತ್ತು ಚರಂಡಿ ಬಗ್ಗೆ ಅಷ್ಟೇ ಹೇಳ್ತಿವಿ. ಇದೆ ರೀತಿ ಇಡೀ ಪ್ಲಾಟ್ ನಲ್ಲಿ ಸಮಸ್ಯೆ ಇದೆ. ಸರಿಯಾದ ರಸ್ತೆ ಇಲ್ಲ, ಇದ್ದ ರಸ್ತೆ ಹದಗೆಟ್ಟರೆ ಕೆಲವೊಂದು ಕಡೆ ರಸ್ತೆಗಳೇ ಇಲ್ಲ. ಇದರಿಂದ ಇಲ್ಲಿನ ಸ್ಥಳೀಯರಿಗೆ ನುಂಗಲಾರದ ತುತ್ತಗಿದೆ. ಇನ್ನು ಚರಂಡಿಯತ್ತ ಒಮ್ಮೆ ಕಣ್ಣು ಹಾಯಿಸಿದರೆ, ಚರಂಡಿ ತುಂಬಿ ಯಾವುದೋ ಕಾಲವಾದಂತೆ ಕಾಣುತ್ತಿದೆ. ಇಲ್ಲಿನ ಸ್ಥಳೀಯರು ಬೆಳಗಾದಕೂಡಲೇ ಈ ತುಂಬಿದ ಚರಂಡಿಯ ದರ್ಶನವನ್ನೇ ಮಾಡಬೇಕು. ಇದರಿಂದ ಇಲ್ಲಿನ ಸ್ಥಳೀಯರಿಗೆ ಸಾಂಕ್ರಮಿಕ ರೋಗದ ಆತಂಕ ಕೂಡ ಹೆಚ್ಚಿದೆ. ಈ ಬಗ್ಗೆ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಎಚ್ಚೆತ್ತು, ಚರಂಡಿ ಸ್ವಚ್ಛತೆಗೆ ಮುಂದಾಗಿ, ಅದರ ನಿರ್ವಹಣೆ ಮಾಡಬೇಕು ಮತ್ತು ರಸ್ತೆಯ ನಿರ್ಮಾಣಕ್ಕಾಗಿ ಶ್ರಮಿಸಬೇಕಿದೆ.

Edited By : Manjunath H D
Kshetra Samachara

Kshetra Samachara

16/11/2021 05:20 pm

Cinque Terre

26.55 K

Cinque Terre

1

ಸಂಬಂಧಿತ ಸುದ್ದಿ