ವರದಿ: ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ.
ನವಲಗುಂದ : ಸ್ವಚ್ಛತೆ, ಸ್ವಚ್ಛತೆ, ಸ್ವಚ್ಛತೆ ಅಂತ ಹೇಳೋದಷ್ಟೇ ಅಲ್ಲದೆ ಅದನ್ನ ಕಾಪಾಡಲು ಸಹ ಎಲ್ಲರೂ ಕೈ ಜೋಡಿಸಿ ನಡೆಯಬೇಕಾಗಿದೆ. ಇಲ್ಲವಾದರೆ ಈಗ ಈ ಅಂಗನವಾಡಿ ಪಕ್ಕದಲ್ಲೇ ಸೃಷ್ಟಿಯಾದ ಅಸ್ವಚ್ಛತೆ ಉದಾಹರಣೆಯಾಗಿ ತೆಗೆದುಕೊಳ್ಳಬಹುದು...
ಇದು ನವಲಗುಂದ ಪಟ್ಟಣದ ಶಂಕರ ಕಾಲೇಜಿನ ಎದುರೇ ಇರುವ ಅಂಗನವಾಡಿ ಕೇಂದ್ರ, ಈಗಾಗಲೇ ಅಂಗನವಾಡಿ ಕೇಂದ್ರಗಳು ಆರಂಭವಾಗಿವೆ. ಪುಟಾಣಿ ಮಕ್ಕಳು ಸಹ ಈಗ ಅಂಗನವಾಡಿ ಯತ್ತ ಮುಖ ಮಾಡಿದ್ದಾರೆ. ಇಂತಹ ಸಂಧರ್ಭದಲ್ಲಿ ಈ ಅಂಗನವಾಡಿ ಕೇಂದ್ರದ ಪಕ್ಕ ಇಷ್ಟು ಕೊಳಚೆ ಮತ್ತು ಹಂದಿಗಳ ಹಾವಳಿ ಇರೋದು ರೋಗಕ್ಕೆ ಆಹ್ವಾನ ನೀಡಿದಂತಾಗಿದೆ. ಇಷ್ಟಕ್ಕೆಲ್ಲ ಕಾರಣ ಯಾರು ಅಂತೀರಾ, ಇದಕ್ಕೆ ಕಾರಣ ಯಾರು ಅಂತಾ ಹೇಳೋದ್ರಿ, ಸ್ಥಳೀಯರು ಇಲ್ಲಿ ಕಸ ಚಲ್ತಾರಂತೆ, ಪುರಸಭೆಯವರು ಬಂದು ಕಸ ವಿಲೇವಾರಿ ಮಾಡ್ತಾರೆ. ಈ ಅಂತರದ ನಡುವೆ ಇಷ್ಟೆಲ್ಲಾ ಕೊಳಚೆ ಉದ್ಭವವಾಗುತ್ತಿದೆ. ಅದೇನೇ ಇರಲಿ ಇಲ್ಲಿಗೆ ಚಿಕ್ಕ ಚಿಕ್ಕ ಮಕ್ಕಳು ಬರ್ತಾರೆ. ಒಂದು ವೇಳೆ ಸ್ಥಳೀಯರು ಇಲ್ಲಿ ಕಸ ಹಾಕುತ್ತಿದ್ರೆ, ಹಾಕದೆ ಕಸ ವಿಲೇವಾರಿ ವಾಹನಕ್ಕೆ ಹಾಕಬೇಕಾಗಿದೆ. ಇನ್ನು ಸಾಧ್ಯವಾದರೆ ಪುರಸಭೆ ವತಿಯಿಂದ ಇಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಇಲ್ಲದಿದ್ದಲ್ಲಿ ಸಾಂಕ್ರಮಿಕ ರೋಗದ ಆತಂಕಕ್ಕೆ ಎಡೆ ಮಾಡಿ ಕೊಟ್ಟಂತಾಗುತ್ತೆ.
Kshetra Samachara
15/11/2021 04:59 pm