ಕುಂದಗೋಳ : ಪಟ್ಟಣದ ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಅಕ್ಕ ಪಕ್ಕದಲ್ಲಿ ಬೆಳೆದ ಕಸ ಕಂಟಿಯನ್ನು ನಿರ್ವಹಣೆ ಮಾಡುವಾಗ ರಸ್ತೆ ಪಕ್ಕದ ಹೆದ್ದಾರಿಯ ಕಲ್ಲುಗಳನ್ನು ನೆಲಸಮ ಮಾಡಲಾಗಿದೆ.
ಹೌದು ! ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ರಸ್ತೆ ಕೊನೆಯಲ್ಲಿ ಲೋಕೋಪಯೋಗಿ ಇಲಾಖೆ ನಿರ್ಮಿಸಿದ ಸಿಮೆಂಟ್ ಕಲ್ಲುಗಳಿಗೆ ರಸ್ತೆ ಪಕ್ಕದ ಕಸ ಕಂಟಿಯನ್ನು ನಿರ್ವಹಣೆ ಮಾಡುವಾಗ ಜೆಸಿಬಿ ತಾಕಿದ ಪರಿಣಾಮ ಈ ಪಾಟಿ ಕಲ್ಲುಗಳು ಹಾಳಾಗಿವೆ.
ರಸ್ತೆ ಅಳತೆಗಾಗಿ ನಿರ್ಮಿಸಿದ ಕಲ್ಲು ಸೇರಿದಂತೆ ಕೆಲ ಕಿಲೋ ಮೀಟರ್ ಅಕ್ಷರ ಬರೆದ ಕಲ್ಲುಗಳು ಮುರಿದು ಹೋಗಿವೆ, ಈ ರಸ್ತೆ ಪಕ್ಕದ ಕಸ ಕಡ್ಡಿ ನಿರ್ವಹಣೆ ಬರದಲ್ಲಿ ಈ ಸುಸಜ್ಜಿತ ಕಲ್ಲು ಹಾಳು ಮಾಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದ್ದು ಈ ಬಗ್ಗೆ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗಮನಿಸಿ ಕ್ರಮ ಕೈಗೊಳ್ಳಬೇಕಿದೆ.
Kshetra Samachara
09/11/2021 04:44 pm