ಅಣ್ಣಿಗೇರಿ:ಪಟ್ಟಣದ ಗದಗ ರಸ್ತೆಯಲ್ಲಿರುವ ಬಾಪೂಜಿ ಶಾಲೆ ಮುಂಭಾಗದಲ್ಲಿ ರಸ್ತೆ ಮೇಲೆ ಪಡಿತರ ಅಕ್ಕಿ ಎಂಬ ವರದಿಯನ್ನು ಭಿತ್ತರಿಸಿದ ಬೆನ್ನಲ್ಲೆ ಸ್ಥಳೀಯ ಪುರಸಭೆ ಮುಖ್ಯಾಧಿಕಾರಿ ಕೆ.ಎಫ್.ಕಟಗಿ ಎಚ್ಚೆತ್ತುಕೊಂಡಿದ್ದಾರೆ.
ಅಕ್ಕಿ ಅವಾಂತರದ ಸುದ್ದಿ ಪಬ್ಲಿಕ್ ನೆಕ್ಸ್ಟ್ ಮಾಧ್ಯಮದ ಮೂಲಕ ಹರಡುತ್ತಿದ್ದಂತಯೇ ಸ್ಥಳೀಯ ಪುರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಅಕ್ಕಿ , ಗೋಧಿ ಚೆಲ್ಲಿರುವ ಸ್ಥಳದಲ್ಲಿ ಬ್ಲಿಚಿಂಗ್ ಪೌಡರ ಹಾಕುವ ಮೂಲಕ ದುರ್ವಾಸನೆಯನ್ನು ನಿಯಂತ್ರಣ ಮಾಡಲು ಮುಂದಾಗಿರುವದು ಎಲ್ಲರ ಗಮನ ಸೆಳೆಯುತ್ತಿದೆ. ಇನ್ನೂ ಮುಂದಾದರು ಸಂಭಂದಿಸಿದ ಅಧಿಕಾರಿಗಳು ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಂಡು ಪಡಿತರ ಆಹಾರವನ್ನು ರಕ್ಷಣೆ ಮಾಡಲು ಮುಂದಾಗುತ್ತಾರೊ ಇಲ್ಲವೊ ಎಂದು ಕಾಯ್ದು ನೋಡುವ ಪರಿಸ್ಥಿತಿ ಸ್ಥಳೀಯರಿಗೆ ಒದಗಿ ಬಂದಂತಾಗಿದೆ.
Kshetra Samachara
08/11/2021 06:18 pm