ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಾರ್ಕಿಂಗ್ ಝೋನ್ ವಿಳಂಬ! ಕಿರಿಕಿರಿ ತಪ್ಪಿದ್ದಲ್ಲ ಸಾರ್ವಜನಿಕರಿಗೆ

ವರದಿ: ಈರಣ್ಣ ವಾಲಿಕಾರ

ಹುಬ್ಬಳ್ಳಿ- ಇಡೀ ರಾಜ್ಯದಲ್ಲೇ ಹುಬ್ಬಳ್ಳಿ - ಧಾರವಾಡ ಎರಡನೇ ಅತೀ ದೊಡ್ಡ ಮಹಾನಗರ ಪಾಲಿಕೆ. ವಾಣಿಜ್ಯ ಮತ್ತು ಅಭಿವೃದ್ದಿ ವಿಚಾರದಲ್ಲಿ ಇಡೀ ರಾಜ್ಯದಲ್ಲೇ ಮುಂಚೂಣಿಯಲ್ಲಿರೋ ಈ ಮಹಾನಗರದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರೋ ವಾಹನ ದಟ್ಟಣೆ, ಪಾರ್ಕಿಂಗ್ ಕಿರಿಕಿರಿ ಹೀಗೇ ಸಾಲು ಸಾಲು ಸಮಸ್ಯೆಗಳು ಪ್ರತಿದಿನ‌ ಇಲ್ಲಿನ‌ ಸಾರ್ವಜನಿಕರು ಎದುರಿಸುತ್ತಿದ್ದಾರೆ. ಪ್ರತಿಯೊಂದು ಹಂತದಲ್ಲಿಯೂ ವೇಗವಾಗಿ ಬೆಳೆಯುತ್ತಿರೋ ಈ ನಗರದಲ್ಲಿ ಸಮಸ್ಯೆಗಳ ಸಾಲು ಮಾತ್ರ ಕಡಿಮೆಯಾಗುತ್ತಿಲ್ಲ.

ಹೌದು,,, ಈ ರೀತಿಯ ಸಮಸ್ಯೆಗಳಲ್ಲೊಂದಾದ ಬೀದಿಬದಿ ವ್ಯಾಪಾರಸ್ಥರ ಸಮಸ್ಯೆಯನ್ನ ಬಗೆಹರಿಸೋ ನಿಟ್ಟಿನಲ್ಲಿ ಕಳೆದ 2013 ರಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗಾಗಿಯೇ ಪ್ರತ್ಯೇಕ ವಲಯ ನಿರ್ಮಾಣ ಮಾಡುವ ಉದ್ದೇಶದಿಂದ ಧಾರವಾಡ ಹೈಕೋರ್ಟ್ ಈ ಪ್ರತ್ಯೇಕ ವಲಯಗಳನ್ನ ನಿರ್ಮಾಣ ಮಾಡಿ ಬೀದಿಬದಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಮಹತ್ತರ ಆದೇಶ ಮಾಡಿತ್ತು. ಆದ್ರೆ ಈವರೆಗೂ ಮಾತ್ರ ಹೈಕೋರ್ಟ್ ನ‌ ಈ ಆದೇಶ ಜಾರಿಯಾಗಿಲ್ಲ.

ಇನ್ನು ಪ್ರಮುಖವಾಗಿ ಕಳೆದ ಹಲವಾರು ವರ್ಷಗಳಿಂದಲೂ ಅವಳಿನಗರದ ಫುಟ್ ಪಾತ್, ಪ್ರಮುಖ‌ರಸ್ತೆಗಳು,‌ಮಾರ್ಕೇಟ್ ರಸ್ತೆ ಸೇರಿದಂತೆ ನಗರದ ಪ್ರಮುಖ ವೃತ್ತಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬೀದಿಬದಿ ವ್ಯಾಪಾರಸ್ಥರು ದಿನಬಳಕೆ ವಸ್ತುಗಳನ್ನ ಮಾರಾಟ ಮಾಡ್ತಾರೆ.‌ ಇದರಿಂದಾಗಿ ಸಾರ್ವಜನಿಕರಿಗೆ ಪ್ರತಿನಿತ್ಯವೂ ಸಾಕಷ್ಟು ಸಮಸ್ಯೆ ಎದುರಾಗುತ್ತಿದೆ‌ ಅಲ್ದೆ ಪಾಲಿಕೆ‌ ಅಧಿಕಾರಿಗಳಿಂದ‌ ಬೀದಿಬದಿ‌ ವ್ಯಾಪಾರಸ್ಥರಿಗೂ ಕಿರಿಕಿರಿ ತಪ್ಪಿದ್ದಲ್ಲ. ಅಧಿಕಾರಿಗಳು ಮಾತ್ರ ಈ ಆದೇಶ ಅನುಷ್ಠಾನಗೊಳಿಸುವಲ್ಲಿ‌ ದಿವ್ಯ ನಿರ್ಲಕ್ಷ್ಯ ವಹಿಸುತ್ತಿದ್ದು ಕೋರ್ಟ್ ಆದೇಶಕ್ಕೂ ಕಿಮ್ಮತ್ತು ನೀಡದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಒಟ್ಟಾರೆ ಸಾರ್ವಜನಿಕರ ಹಿತಾಸಕ್ತಿ ದೃಷ್ಠಿಯಿಂದ ಹೊರಡಿಸಿದ ಆದೇಶವನ್ನು ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದಾಗಿ ಈ‌ ಆದೇಶ ಪರಿಪಾಲನೆಯಾಗದೇ ವಿಳಂಬವಾಗುತ್ತಿರೋದು ನಿಜಕ್ಕೂ‌ ಬೇಸರದ ಸಂಗತಿ.‌

Edited By : Nagesh Gaonkar
Kshetra Samachara

Kshetra Samachara

06/11/2021 05:28 pm

Cinque Terre

28.79 K

Cinque Terre

3

ಸಂಬಂಧಿತ ಸುದ್ದಿ