ವರದಿ: ಶಶಿಧರ ಶಿರಸಂಗಿ
ಲಕ್ಷ್ಮೇಶ್ವರ: ಪಬ್ಲಿಕ್ ನೆಕ್ಟ್ಸ್ ವರದಿಯಿಂದ ಎಚ್ಚೆತ್ತ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಯಳವತ್ತಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅವ್ಯವಸ್ಥೆಗೆ ಮುಕ್ತಿ ನೀಡಿದ್ದಾರೆ.
'ರಸ್ತೆ ಗೋಳು ಕೇಳೋರು ಯಾರು?' ಶೀರ್ಷಿಕೆ ಅಡಿ ಪಬ್ಲಿಕ್ ನೆಕ್ಸ್ಟ್ ಯಳವತ್ತಿ ಗ್ರಾಮ ಸಮಸ್ಯೆ ಬಗ್ಗೆ ವರದಿ ಮಾಡಿತ್ತು. ಗ್ರಾಮದ ಮುಖಂಡರಾದ ರಾಜನ ಗೌಡ ಅಜ್ಜನ ಗೌಡರ ಹಾಗೂ ಶಿವಯ್ಯ ಮಠಪತಿ ನಮ್ಮ ವರದಿಯನ್ನು ಗದಗ ಜಿಲ್ಲಾ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಇದರಿಂದ ಎಚ್ಚೆತ್ತ ಅಧಿಕಾರಿಗಳು ಕೂಡಲೇ ಯಳವತ್ತಿ ಚಿಂಚಲಿ ರಸ್ತೆಯ ದುರಸ್ತಿಗೊಳಿಸಿದ್ದಾರೆ.
Kshetra Samachara
13/10/2021 09:51 pm