ಕಲಘಟಗಿ: ತಾಲೂಕಿನ ವಿದ್ಯಾರ್ಥಿಗಳಿಗೆ ಬಸ್ಸಿನ ಸಮಸ್ಯೆಯಾಗುತ್ತಿದ್ದು, ಬಿಸರಳ್ಳಿ ಹಾಗೂ ಬೇಗೂರು ಗ್ರಾಮದಿಂದ ಬಹಳಷ್ಟು ವಿದ್ಯಾರ್ಥಿಗಳು ಪಟ್ಟಣದ ಪದವಿ ಪೂರ್ವ ಕಾಲೇಜಿಗೆ ನಡೆದುಕೊಂಡೆ ಬರುತ್ತಾರೆ, ಇವರ ಗೋಳು ಕೇಳವವರು ಯಾರು ಎಂಬ ಸ್ಥಿತಿ ಇದೆ.
ವಿದ್ಯಾರ್ಥಿಗಳು ಕಾಲೇಜಿಗೆ ಸರಿಯಾದ ಸಮಯಕ್ಕೆ ಬರಲು ಬೆಳಿಗ್ಗೆ ಸರಿಯಾದ ಬಸ್ ವ್ಯವಸ್ಥೆ ಇರುವುದಿಲ್ಲ.ಪ್ರತಿದಿನ ಕಾಲೇಜಿಗೆ ಬಿಸಿಲು ಮಳೆ ಎನ್ನದೇ ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ಒಳಗಾಗಿದ್ದಾರೆ.ಕಲಘಟಗಿ ತಾಲೂಕಿನಲ್ಲಿ ನೂತನ
ಡಿಪೋ ಇದ್ದರು ಸಹ ಸಮಸ್ಯೆ ಪರಿಹಾರವಾಗಿಲ್ಲ.
ಶಾಸಕ ಸಿ ಎಂ ನಿಂಬಣ್ಣವರ ಡಿಪೋ ಅಧಿಕಾರಿಗಳಿಗೆ ಬಸ್ ಸಮಸ್ಯೆ ಪರಿಹರಿಸುವಂತೆ ಮೌಖಿಕವಾಗಿ ಸೂಚಿಸಿದ್ದರು ಸಹ ಸಮಸ್ಯೆ ಪರಿಹಾರ ಕಂಡಿಲ್ಲ.ಕಲಘಟಗಿ ತಾಲೂಕಿನ ಸಾರಿಗೆ ಅಧಿಕಾರಿಗಳು ಆದಷ್ಟು ಬೇಗನೆ ಈ ಸಮಸ್ಯೆಯನ್ನು ಪರಿಹರಿಸಬೇಕೆಂದು ಬಿಸರಳ್ಳಿ ಮತ್ತು ಬೇಗೂರ ಗ್ರಾಮದ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
Kshetra Samachara
10/10/2021 03:45 pm