ಹುಬ್ಬಳ್ಳಿ: ಅದು ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಏನೋ ನಿಜ ಆದರೆ ಈ ಪಾಲಿಕೆ ಅಂಗಳದಲ್ಲಿರುವ ಉದ್ಯಾನವನವೇ ಅವ್ಯವಸ್ಥೆ ಆಗರವಾಗಿದೆ.
ಸುಮಾರು 1933ರಲ್ಲಿ ಸವಣೂರಿನ ನವಾಬರು ನಿರ್ಮಾಣ ಮಾಡಿರುವ ಈ ಚಿಟಗುಪ್ಪಿ ಉದ್ಯಾನವನ ನೋಡಿದರೇ ನಿಜಕ್ಕೂ ಬೇಸರ ಮೂಡಿಸುತ್ತದೆ. ಎಲ್ಲೆಂದರಲ್ಲಿ ಚಲ್ಲಿರುವ ಕಸ, ಮುರಿದು ಬಿದ್ದಿರುವ ಫಲಕಗಳು, ದೊಡ್ಡ ನದಿಯಂತೆ ನಿಂತಿರುವ ಕೊಳಚೆ ನೀರು ಇವೆಲ್ಲವೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚಿಟಗುಪ್ಪಿ ಉದ್ಯಾನವನದ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
ಇಲ್ಲಿನ ಚಿಟಗುಪ್ಪಿ ಆಸ್ಪತ್ರೆಗೆ ದಿನಕ್ಕೆ ನೂರಾರು ಜನರು ಆಗಮಿಸುತ್ತಾರೆ. ಆದರೆ ಇಲ್ಲಿನ ನಿರ್ವಹಣೆ ಕೊರತೆಯಿಂದ ಇಂತಹದೊಂದು ಅವ್ಯವಸ್ಥೆ ತಲೆದೂರಿದ್ದು, ಪಾಲಿಕೆಯು ಮನೆಯ ಮುಂದಿನ ಅಂಗಳವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸಾಧ್ಯವಾಗದೇ ಇರುವಾಗ ಇನ್ನೂ ಅವಳಿನಗರದ ಅಭಿವೃದ್ಧಿ ಆದರೂ ಹೇಗೆ ಮಾಡುತ್ತದೆ ಎಂಬುವುದು ಸಾರ್ವಜನಿಕರ ಯಕ್ಷ ಪ್ರಶ್ನೆಯಾಗಿದೆ.
ಒಟ್ಟಿನಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ರಾಜಕೀಯದವರಂತೆ ಆಶ್ವಾಸನೆ ಕೊಡಲು ಮುಂದಾಗಿದೆ ವಿನಃ ಯಾವುದೇ ಕಾರ್ಯವನ್ನು ಕೈಗೆತ್ತಿಕೊಂಡಿಲ್ಲ. ಇನ್ನಾದರೂ ಪಾಲಿಕೆ ಕಣ್ಣು ಬಿಟ್ಟು ನೋಡಿ ಐತಿಹಾಸಿಕ ಹಿನ್ನಲೆಯುಳ್ಳ ಚಿಟಗುಪ್ಪಿ ಉದ್ಯಾನವನವನ್ನು ಅಭಿವೃದ್ಧಿ ಮಾಡಬೇಕಿದೆ.
Kshetra Samachara
03/10/2021 01:42 pm